Advertisement
ಪ್ರಕೃತಿಯನ್ನು ಶುಚಿ ಗೊಳಿಸಲು ಪ್ರಕೃತಿಯೇ ನೀಡಿದ ಜಾಡಮಾಲಿ ಹಕ್ಕಿ ಎಂದರೂ ತಪ್ಪಾಗಲಾರದು. ರಣ ಹದ್ದು ಅಂದರೆ ಭಾರತೀಯ ರಣ ಹದ್ದು ಮತ್ತು ಇದಕ್ಕೆ ತುಂಬಾ ಸಾಮ್ಯತೆಇದೆ. ಇವೆರಡೂ ಪ್ರಕೃತಿ ಶುಚಿ ಕಾರ್ಯದಲಿ Éಅಗ್ರಸ್ಥಾನ ವಹಿಸುತ್ತವೆ. ಅಂತೆ ಇವೆರಡೂ ಹಕ್ಕಿ ಪರಿಸರ ಶುಚಿಕಾರ್ಯ ನಿರ್ವಸುತ್ತಿದ್ದರೂ ಅಳಿವಿನ ಅಪಾಯದಲ್ಲಿರುವುದು ದುರ್ದೈವ. ದನಗಳ ಮಾಂಸ, ಕೊಳೆತ ತಿಪ್ಪೆಯ ಆಹಾರ ತಿನ್ನುತ್ತ ಇರುವ ಇವೆರಡೂ ದೇಹದ ಗಾತ್ರ, ರೆಕ್ಕೆ ವಿನ್ಯಾಸ, ಹಾರುವುದು, ಹಾರುತ್ತಾ ತೇಲುವುದು ಮೊದಲಾದ ಸ್ವಭಾವದಲ್ಲಿ ಸಾಮ್ಯತೆ ಇದೆ. ಹದ್ದಿನ ಕುತ್ತಿಗೆ ಮೇಲ್ಭಾಗದಲ್ಲಿ ಕಾಲರಿನಂತೆ ಬಿಳಿ ಗರಿಗಳಿವೆ. ಅಂತೆ ಎಡೊjಟೆನrಕೊಕ್ಕರೆಯ ಕುತ್ತಿಗೆ ಹಿಂಭಾಗದಲ್ಲಿ ಮೇಲೆ ಕೇಸರಿ ಬಣ್ಣದ ಮುತ್ತು ಪೋಣಿಸಿದಂತಿರುವ ಎದ್ದುಕಾಣುವ ಭಾಗಇದೆ. ಅದರಂತೆ ಕುತ್ತಿಗೆ ಬುಡದಲ್ಲಿ ಎದೆಯ ಕೆಳಗಡೆ ತೂಗುವ ಚೀಲದಂತಿರುವ ಜೋಳಿಗೆ ಇದೆ. ಇದರಿಂದ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಕುತ್ತಿಗೆಯ ಕೆಳಗೆ ನೇತಾಡುವ ಕೆಂಪನೆಯ ಚೀಲ 30 ಸೆಂ.ಮೀ. ದೊಡ್ಡದಿದೆ. ಇದರ ರೆಕ್ಕೆ ರಣ ಹದ್ದಿನ ರೆಕ್ಕೆಯನ್ನು ತುಂಬಾ ಹೋಲುತ್ತದೆ. ರೆಕ್ಕೆ ಮೇಲ್ಭಾಗ ನೀಲಿಗಪ್ಪು ಬಣ್ಣದಿಂದ ಕೂಡಿರುತ್ತದೆ. ತುದಿಯಲ್ಲಿ ಬೂದುಬಣ್ಣ, ಹೊಟ್ಟೆ ಭಾಗ ಮಾಸಲು ಬಿಳಿ ಬಣ್ಣ. ಕುತ್ತಿಗೆ, ತಲೆಕೇಸರಿ ಬಣ್ಣದ್ದಾಗಿರುತ್ತದೆ. ಈ ಹಕ್ಕಿ ಸರಾಸರಿ 135 ಸೆಂ.ಮೀ ಇರುತ್ತದೆ. ರೆಕ್ಕೆಯ ಅಗಲ 250 ಸೆಂ.ಮೀ. ಸುಮಾರು 43 ವರ್ಷ ದೀರ್ಘಾಯುಷ್ಯ ಇರುವ ಕೊಕ್ಕರೆ. ಕೊಕ್ಕರೆಗಳಲ್ಲಿಯೇ ಹೆಚ್ಚು ವರ್ಷ ಬದುಕುವ ಹಕ್ಕಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಸ್ಥೂಲ ಕಾಯದ ಈ ಕೊಕ್ಕರೆ ಸುಮಾರು 8 ರಿಂದ 11 ಕೆ.ಜಿ ಭಾರವಿರುತ್ತದೆ. ಇದೇ ಗುಂಪಿಗೆ ಸೇರಿದ ಆಫ್ರಿಕಾದ ನಿವಾಸಿ ಮೆರಂಬು ಸ್ಟಾರ್ಕ್ 8.9 ಕೆಜಿ ಭಾರದಿಂದ ಕೂಡಿರುತ್ತದೆ. ಇದಕ್ಕಿಂತ ಹೆಚು ಸ್ಥೂಲ ದೇಹದ ಹಕ್ಕಿ ಗ್ರೇಟರ್ ಎಟೂj ಟೆಂಟ್‌ಕೊಕ್ಕರೆ. ಇದರ ಒಂದು ರೆಕ್ಕೆಯ ಅಳತೆ 80.5 ಸೆಂ. ಮೀ. ಇದರ ಬಾಲ 31.8 ಸೆಂ.ಮೀ ಇದೆ. ಕುತ್ತಿಗೆ ಕೆಳಗಿನ ಚೀಲ ದೊಡ್ಡದಾದಾಗ ಸುಮಾರು 32.4 ಸೆಂ.ಮೀ ಅಗಲವಾಗುತ್ತದೆ. ಅನ್ನ ನಾಳಕ್ಕೆ ಮತ್ತು ಈ ಚೀಲಕ್ಕೆ ಸಂಬಂಧವಿರುವುದಿಲ್ಲ. ಇದು ಶ್ವಾಸ ನಾಳಕ್ಕೆ ಸೇರಿದೆ. ಇದು ಗಾಳಿ ತುಂಬಿಸಿಡಲು ಸಹಕರಿಸುತ್ತವೆ.ಇದರಿಂದ ಕೊಕ್ಕರೆಗೆ ಏನು ಉಪಯೋಗ? ಈ ವಿಚಾರವಾಗಿ ಸಂಶೋಧನೆ ನಡೆಯಬೇಕಿದೆ.
Related Articles
Advertisement