Advertisement
ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟ್‌ರ್ ಆಗಿ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡಿದ ಭಾರತದ ಬಾಲಕ ಪರಿಮಾರ್ಜನ್ ನೇಗಿ ತನ್ನ 13ನೇ ವರ್ಷದಲ್ಲೇ ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟ್‌ರ್ ಎಂದೆನಿಸಿಕೊಂಡರೆ, ಕಿರಿಯ ಸಾಧಕರ ಸಾಲಿಗೆ 2018ರಲ್ಲಿ ಭಾರತದ ರಮೇಶ್‌ಬಾಬು ಪ್ರಗ್ನಾನಂದ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಹೀಗೆ ಈ ಚೆಸ್ ಎಂಬ ಮಾಯಾ ಆಟಕ್ಕೆ ಹೊಸ ಕಿರಿಯ ಮುಖಗಳು ಸಾಧನೆ ಮಾಡುತ್ತಿರುವುದು ಇತರರಿಗೂ ಸ್ಫೂರ್ತಿಯಾಗಿರುವುದು ಸತ್ಯ. ಶಾಲೆ, ಕಾಲೇಜುಗಳಲ್ಲಿ ಈ ಚೆಸ್ ಆಟದಲ್ಲಿ ಆಸಕ್ತಿ ತೋರಿಸಿ, ಮುಂದೆಯೂ ಇದರಲ್ಲಿ ಆಸಕ್ತಿ ಬೆಳೆಸಿಕೊಂಡರೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಸಾಮಾನ್ಯ ಜ್ಞಾನದ ಜತೆಗೆ ಆಟದ ನಿಯಮ ಹಾಗೂ ಪರಿಣತರ ಸಲಹೆಗಳನ್ನು ಪಡೆದರೆ ಉತ್ತಮ ಆಟಗಾರರಾಗಬಹುದು.
ಏಕಾಗ್ರತೆ, ಗ್ರಹಿಕೆ, ಮುಂದಾಲೋಚನೆ, ಕೆಲವು ರಹಸ್ಯ, ಎದುರಾಳಿಯ ಆಲೋಚನಾಶಕ್ತಿಯನ್ನು ಗ್ರಹಿಸುವ ಬುದ್ಧಿವಂತಿಕೆ ಈ ಆಟಗಾರನಿಗೆ ಇರಬೇಕು. ಇದರ ಕುರಿತು ತಿಳಿದುಕೊಂಡರೆ ಚೆಸ್ ತರಬೇತುದಾರರಾಗಿ, ತೀರ್ಪುಗಾರರಾಗಿ ಭಾಗವಹಿಸಲೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವಕಾಶಗಳು ಸಾಕಷ್ಟಿವೆ. ಜೀವನ ನಿರ್ವಹಣೆಗಾಗಿ ಇದನ್ನೇ ಅವಲಂಭಿಸಬಹುದು ಅಥವಾ ಹವ್ಯಾಸವನ್ನಾಗಿ ಮಾಡಿ ಪಾರ್ಟ್ ಟೈಮ್ ಆಗಿಯೂ ಇದರಲ್ಲಿ ಮುಂದುವರಿಸಬಹುದು. ಭರತ್ ರಾಜ್ ಕರ್ತಡ್ಕ