Advertisement

ಎಂಟು ಸೋಲಿನೊಂದಿಗೆ ಕೂಟ ಮುಗಿಸಿದ ಆನಂದ್‌

12:15 AM Jul 31, 2020 | Hari Prasad |

ಚೆನ್ನೈ: ಲೆಜೆಂಡ್ಸ್‌ ಆಫ್ ಚೆಸ್‌ ಟೂರ್ನಮೆಂಟ್‌ನಲ್ಲಿ ವಿಶ್ವನಾಥನ್‌ ಆನಂದ್‌ ಎಂಟು ಸೋಲಿನೊಂದಿಗೆ ಕೂಟ ಮುಗಿಸಿದ್ದಾರೆ.

Advertisement

ಕಳೆದ ರಾತ್ರಿ ನಡೆದ 9ನೇ ಹಾಗೂ ಕೊನೆಯ ಸುತ್ತಿನಲ್ಲೂ ಆನಂದ್‌ ಪರಾಭವಗೊಂಡರು. ದೀರ್ಘಕಾಲದ

ಎದುರಾಳಿ ವ್ಯಾಸಿಲ್‌ ಇವಾನ್‌ಚುಕ್‌ ಎದುರಿನ ಈ ಮುಖಾಮುಖಿಯಲ್ಲಿ ಅವರು 2.5-2.5 ಸಮಬಲ ಸಾಧಿಸಿದರೂ ಕಪ್ಪು ಕಾಯಿಗಳಿಂದ ಆಡಿದ ಉಕ್ರೇನಿಯನ್‌ ಆಟಗಾರನನ್ನು ವಿಜಯಿ ಎಂದು ಘೋಷಿಸಲಾಯಿತು.

59 ನಡೆಗಳ ಬಳಿಕ ಟೈ-ಬ್ರೇಕರ್‌ ಪಂದ್ಯವನ್ನು ಇಬ್ಬರೂ ಡ್ರಾ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರು.

150,000 ಬಹುಮಾನದ ಈ ಕೂಟದಲ್ಲಿ ಆನಂದ್‌ 9 ಪಂದ್ಯಗಳಲ್ಲಿ ಕೇವಲ ಒಂದು ಜಯವನ್ನಷ್ಟೇ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

Advertisement

ಅವರಿಗೆ ಶರಣಾದ ಆಟಗಾರ ಬೊರಿಸ್‌ ಗೆಲ್‌ಫಾಂಡ್‌. 10 ಆಟಗಾರರ ಟೂರ್ನಿಯಲ್ಲಿ ಆನಂದ್‌ ಒಟ್ಟು 7

ಅಂಕಗಳೊಂದಿಗೆ 9ನೇ ಸ್ಥಾನಿಯಾದರು. 6 ಅಂಕಗಳನ್ನಷ್ಟೇ ಹೊಂದಿದ ಪೀಟರ್‌ ಲೆಕೊ ಅಂತಿಮ ಸ್ಥಾನಕ್ಕೆ ಕುಸಿದರು.

ಕಾರ್ಲ್ಸೆನ್‌ ಅಜೇಯ ಓಟ
ವಿಶ್ವದ ನಂ.1 ಆಟಗಾರ ಮ್ಯಾಗ್ನಸ್‌ ಕಾರ್ಲ್ಸೆನ್‌ ಅಂತಿಮ ಮುಖಾಮುಖಿಯಲ್ಲಿ ನಾರ್ವೆಯ ವ್ಲಾದಿಮಿರ್‌ ಕ್ರಾಮ್ನಿಕ್‌ ವಿರುದ್ಧ 3-1 ಅಂತರದ ಜಯ ಸಾಧಿಸಿದ ಅಜೇಯ ದಾಖಲೆ ಕಾಯ್ದುಕೊಂಡರು. 25 ಅಂಕಗಳೊಂದಿಗೆ ಅವರು ಲೀಗ್‌ ಹಂತದ ಅಗ್ರಸ್ಥಾನದ ಗೌರವ ಸಂಪಾದಿಸಿದರು. ಕಾರ್ಲ್ಸೆನ್‌ ಅವರಿನ್ನು ಸೆಮಿಫೈನಲ್‌ನಲ್ಲಿ ರಶ್ಯದ ಪೀಟರ್‌ ಸ್ವಿಡ್ಲರ್‌ ವಿರುದ್ಧ ಸ್ಪರ್ಧಿಸಲಿದ್ದಾರೆ. ಇನ್ನೊಂದು ಉಪಾಂತ್ಯದಲ್ಲಿ ಹಂಗೇರಿಯ ಅನಿಶ್‌ ಗಿರಿ ಮತ್ತು ರಶ್ಯದ ಇಯಾನ್‌ ನೆಪೊಮ್ನಿಯಾಚಿ ಎದುರಾಗುವರು. ಇದು ‘ಚೆಸೇಬಲ್‌ ಮಾಸ್ಟರ್’ ಸೆಮಿಫೈನಲ್‌ನ ಮರು ಪಂದ್ಯವಾಗಲಿದೆ.

ಅಂತಿಮ ಲೀಗ್‌ ಫ‌ಲಿತಾಂಶ: 1. ಮ್ಯಾಗ್ನಸ್‌ ಕಾರ್ಲ್ಸೆನ್‌ (25). 2. ಇಯಾನ್‌ ನೆಪೊಮ್ನಿಯಾಚಿ (20), 3. ಅನಿಶ್‌ ಗಿರಿ (18), 4. ಪೀಟರ್‌ ಸ್ವಿಡ್ಲರ್‌ (14), 5. ವ್ಯಾಸಿಲ್‌ ಇವಾನ್‌ಚುಕ್‌ (13), 6. ವ್ಲಾದಿಮಿರ್‌ ಕ್ರಾಮ್ನಿಕ್‌ (12), 7. ಬೊರಿಸ್‌ ಗೆಲ್‌ಫಾಂಡ್‌ (11), 8. ಡಿಂಗ್‌ ಲಿರೆನ್‌ (7), 9. ವಿಶ್ವನಾಥನ್‌ ಆನಂದ್‌ (7), 10. ಪೀಟರ್‌ ಲೆಕೊ (6).

Advertisement

Udayavani is now on Telegram. Click here to join our channel and stay updated with the latest news.

Next