Advertisement

Chess; 3 ದಶಕಗಳ ಬಳಿಕ ನಂ.1 ಪಟ್ಟದಿಂದ ವಿಶ್ವನಾಥನ್‌ ಆನಂದ್‌ ಕೆಳಕ್ಕೆ

11:25 PM Sep 01, 2023 | Team Udayavani |

ಹೊಸದಿಲ್ಲಿ: ಭಾರತದ ಲೆಜೆಂಡ್ರಿ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ 37 ವರ್ಷಗಳ ಬಳಿಕ ನಂ.1 ಸ್ಥಾನದಿಂದ ಕೆಳಗಿಳಿದಿದ್ದಾರೆ. 17 ವರ್ಷದ ಜಿಎಂ ಡಿ. ಗುಕೇಶ್‌ ಅವರೀಗ ದೇಶದ ಅಗ್ರಮಾನ್ಯ ಚೆಸ್‌ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಗುಕೇಶ್‌ ಕಳೆದ ಫಿಡೆ ವಿಶ್ವಕಪ್‌ ಕೂಟದ ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಸೋಲನುಭವಿಸಿದ್ದರು. ಅವರೀಗ ವಿಶ್ವ ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೆ ಏರಿದ್ದಾರೆ. ಗುಕೇಶ್‌ ಟಾಪ್‌-10 ಯಾದಿಯಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು. ಆರ್‌. ಪ್ರಜ್ಞಾನಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ 19ನೇ, ಭಾರತದ ನಂ.3ನೇ ಚೆಸ್‌ ಆಟಗಾರನಾಗಿದ್ದಾರೆ.

ವಿಶ್ವನಾಥನ್‌ ಆನಂದ್‌ 1986ರ ಜುಲೈ ಒಂದರಂದು ಭಾರತದ ನಂ.1 ಚೆಸ್‌ ಆಟಗಾರನಾಗಿ ಮೂಡಿಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next