Advertisement

ಮನಕಲಕುವ “ಚೆರ್ನೊಬಿಲ್ ಸೀರಿಯಲ್”: ದುರಂತದ ಕರಾಳಮುಖ ಅನಾವರಣ!

09:11 AM Jun 06, 2019 | Nagendra Trasi |

ವಾಷಿಂಗ್ಟನ್: ಎಚ್ ಬಿಒ(ಹೋಮ್ ಬಾಕ್ಸ್ ಆಫೀಸ್) ನಿರ್ಮಾಣದ, ಜೋಹಾನ್  ರೆನ್ಕ್ ನಿರ್ದೇಶನದಲ್ಲಿ ಮೂಡಿಬಂದ ಮಿನಿ ಸೀರಿಯಲ್ “ ಚೆರ್ನೊಬಿಲ್” ಅಣು ಸ್ಥಾವರ ದುರಂತದ ಕರಾಳತೆಯನ್ನು ಬಿಚ್ಚಿಟ್ಟಿದೆ!

Advertisement

ಚೆರ್ನೊಬಿಲ್ ಸೀರಿಯಲ್ ಐದು ಭಾಗಗಳಲ್ಲಿ ಈಗಾಗಲೇ ನಾಲ್ಕು ಎಪಿಸೋಡ್ ಪೂರ್ಣಗೊಂಡಿದೆ. ಎಲ್ಲೆಡೆ ಈ ಸೀರಿಯಲ್ ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಹೌದು 1986ರ ಏಪ್ರಿಲ್ 26ರಂದು ಉಕ್ರೈನ್ ನಲ್ಲಿನ ಚೆರ್ನೊಬಿಲ್ ನ್ಯೂಕ್ಲಿಯರ್ ಇಂಧನ ಘಟಕ ಸ್ಫೋಟಗೊಂಡುಬಿಟ್ಟಿತ್ತು. ಇದರಿಂದ ಹೊರಸೂಸಿದ ಯಮಸ್ವರೂಪಿ ವಿಕಿರಣಗಳಿಂದ ಸೋವಿಯತ್ ರಷ್ಯಾ, ಬೆಲಾರಸ್, ಉಕ್ರೈನ್ ಹಾಗೂ ಪಶ್ಚಿಮ ಯುರೋಪ್ ನ ಜನರು ನಲುಗಿ ಹೋಗಿದ್ದರು.

ಇತಿಹಾಸದಲ್ಲಿಯೇ ಕಂಡು, ಕೇಳರಿಯದ ಮಹಾ ದುರಂತ ಇದಾಗಿದೆ. ಆರಂಭಿಕ ಮಾಹಿತಿ ಪ್ರಕಾರ 52 ಜನರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿರುವುದಾಗಿ ಸುದ್ದಿ ಬಿತ್ತರಗೊಂಡಿತ್ತು. 31 ಮಂದಿ ಸಾವನ್ನಪ್ಪಿದ್ದರು. ವಿಪರ್ಯಾಸ ಏನಂದರೆ ಸೋವಿಯತ್ ಒಕ್ಕೂಟದ ಹೊರಜಗತ್ತಿಗೆ ಚೆರ್ನೊಬಿಲ್ ದುರಂತದ ಬಗ್ಗೆ ಸರಿಯಾದ ಮಾಹಿತಿಯ ಸಿಕ್ಕಿರಲಿಲ್ಲವಾಗಿತ್ತು. ಚೆರ್ನೊಬಿಲ್ ದುರಂತ ಏನೆಲ್ಲಾ ಅನಾಹುತ ಸೃಷ್ಟಿಸಿತ್ತು ಎಂಬುದಕ್ಕೆ “ಈ ಚೆರ್ನೊಬಿಲ್” ಸೀರಿಯಲ್ ಸ್ಪಷ್ಟ ಉತ್ತರ ನೀಡುತ್ತದೆ…

Advertisement

Udayavani is now on Telegram. Click here to join our channel and stay updated with the latest news.

Next