Advertisement
ಉಕ್ರೇನಿಯನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್, ರಷ್ಯಾದ ಪಡೆಗಳು ವಿಶ್ವದ ಅತ್ಯಂತ ಕೆಟ್ಟ ಪರಮಾಣು ಅಪಘಾತಗಳ ಸ್ಥಳವಾದ ಚೆರ್ನೋಬಿಲ್ ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿವೆ ಎಂದು ಹೇಳಿದ್ದಾರೆ.
Related Articles
Advertisement
ಘೋರ ದುರಂತ
ಏಪ್ರಿಲ್ 1986 ರಲ್ಲಿ ಸುರಕ್ಷತಾ ಪರೀಕ್ಷೆಯ ಸಮಯದಲ್ಲಿ ಸ್ಫೋಟಗೊಂಡ ಪರಿಣಾಮ ವಿಕಿರಣಗಳನ್ನು ಯುರೋಪಿನಾದ್ಯಂತ ಹರಡಿತ್ತು, ಮಾತ್ರವಲ್ಲದೆ ಮತ್ತು ಪೂರ್ವ ಅಮೆರಿಕಾ ವನ್ನೂ ತಲುಪಿತ್ತು. ವಿಕಿರಣಶೀಲ ಸ್ಟ್ರಾಂಷಿಯಮ್, ಸೀಸಿಯಮ್ ಮತ್ತು ಪ್ಲುಟೋನಿಯಮ್ ಮುಖ್ಯವಾಗಿ ಉಕ್ರೇನ್ ಮತ್ತು ನೆರೆಯ ಬೆಲಾರಸ್ ಮತ್ತು ರಷ್ಯಾ ಮತ್ತು ಯುರೋಪ್ನ ಕೆಲವು ಭಾಗಗಳ ಮೇಲೆ ಪರಿಣಾಮ ಬೀರಿತು. ದುರಂತದ ನೇರ ಮತ್ತು ಪರೋಕ್ಷ ಸಾವಿನ ಸಂಖ್ಯೆಗಳ ಅಂದಾಜುಗಳು ಕಡಿಮೆ ಎಂದರೆ ಸಾವಿರ, ಆದರೆ ವಿಶ್ವದಾದ್ಯಂತ 93,000 ಹೆಚ್ಚುವರಿ ಕ್ಯಾನ್ಸರ್ ಸಾವುಗಳಿಗೆ ಕಾರಣವಾಗಿತ್ತು.
ಉಕ್ರೇನ್‌ನ ನಾಲ್ಕು ಕಾರ್ಯಾಚರಣಾ ಪರಮಾಣು ವಿದ್ಯುತ್ ಸ್ಥಾವರಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಚೆರ್ನೋಬಿಲ್‌ನಲ್ಲಿ ಉಳಿದಿರುವ ತ್ಯಾಜ್ಯ ಮತ್ತು ಇತರ ಸೌಲಭ್ಯಗಳಲ್ಲಿ ಯಾವುದೇ “ವಿನಾಶ” ಕಂಡುಬಂದಿಲ್ಲ ಎಂದು ವಿಶ್ವಸಂಸ್ಥೆಯ ಪರಮಾಣು ಪರಿವೀಕ್ಷಕರು ಗುರುವಾರ ಉಕ್ರೇನ್‌ನ ಪರಮಾಣು ನಿಯಂತ್ರಕವನ್ನು ಉಲ್ಲೇಖಿಸಿ ಹೇಳಿದ್ದಾರೆ.