Advertisement

ನೋ ಬ್ಯಾಗ್‌ ಡೇ : ವಿದ್ಯಾರ್ಥಿಗಳಿಗೆ ಅನ್ನದ ಬಟ್ಟಲ ಪಾಠ

11:25 AM Jul 29, 2018 | Team Udayavani |

ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಶಾಲಾ ಮಕ್ಕಳಿಗೆ ಶನಿವಾರ ನೋ ಬ್ಯಾಗ್‌ ಡೇ ಅಂಗವಾಗಿ ಅನ್ನದ ಮಹತ್ವ ಅರಿಯುವ ಸಲುವಾಗಿ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ಹಾಗೂ ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸುವ ಕುರಿತು ಮಾಹಿತಿ ನೀಡಲಾಯಿತು.

Advertisement

ಚೆನ್ನಾವರ ಪಟ್ಟೆ ಲಕ್ಷ್ಮೀ ರೈ ಅವರ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ನಮ್ಮ ಆಹಾರ ಬೆಳೆಯಾದ ಭತ್ತದ ಉತ್ಪಾದನೆ ಯಾವ ರೀತಿ ಆಗುತ್ತದೆ ಎಂಬ ಮಾಹಿತಿ ಹೆಚ್ಚಿನ ಮಕ್ಕಳಿಗೆ ಇರುವುದಿಲ್ಲ. ಈಗ ಗದ್ದೆ ಕಾಣುವುದೇ ವಿರಳ. ಹೀಗಾಗಿ, ಭತ್ತ ಬೆಳೆಯುವುದು ಹೇಗೆ? ಬಿತ್ತನೆ, ನಾಟಿ ಮೊದಲಾದ ವಿಚಾರ ತಿಳಿಸಿಕೊಡುವ ನಿಟ್ಟಿನಲ್ಲಿ ಹಾಗೂ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಗದ್ದೆಯಲ್ಲಿ ಭತ್ತದ ಕೃಷಿಯ ಕುರಿತು ತಿಳಿಹೇಳಲಾಯಿತು.

ಆಸಕ್ತಿಯಿಂದ ಗದ್ದೆಗಿಳಿದ ವಿದ್ಯಾರ್ಥಿಗಳಿಗೆ ಪರಿಣತರಿಂದ ಮಾಹಿತಿ ನೀಡಲಾಯಿತು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರ ಬಾಯಿಯಿಂದ ಕೇಳಿಬರುತ್ತಿದ್ದ ಓ ಬೇಲೇ – ಓ ಬೇಲೆ… ಹಾಡುಗಳನ್ನು ಮಕ್ಕಳೂ ಹಾಡಿದರು. ಕೃಷಿಯ ನಂಟನ್ನು ಬಿಡದೆ ನೇಜಿ ನಾಟಿ ಮಾಡುವ ಸಮಯದಲ್ಲಿ ತಮ್ಮನ್ನು ತಾವೇ ಹುರಿದುಂಬಿಸಿಕೊಳ್ಳಲು ಹಾಡುತ್ತಿದ್ದ ಜಾನಪದ ಹಾಡು, ಪಾಡ್ದನಗಳನ್ನು ಮಕ್ಕಳೂ ಹಾಡಿ ಸಂಭ್ರಮಿಸಿದರು.

ಭತ್ತದ ಕೃಷಿಯಿಂದ ದೂರ ಸರಿಯುವ ಕಾಲದಲ್ಲಿ ವಿದ್ಯಾರ್ಥಿಗಳು, ಯುವಜನತೆ ಈ ಕೃಷಿಯ ಬಗ್ಗೆ ನೈಜವಾಗಿ ತಿಳಿವಳಿಕೆ ಪಡೆಯುವುದು ಸ್ವತಃ ಗದ್ದೆಗಿಳಿದರೆ ಮಾತ್ರ ಎಂಬುದನ್ನು ಮನಗಂಡ ಶಿಕ್ಷಕರು, ಈ ಪ್ರಯತ್ನ ಮಾಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಾಂತಾ ಕುಮಾರಿ ಎನ್‌., ಶಿಕ್ಷಕಿಯರಾದ ಶ್ವೇತಾ, ರಂಝೀನಾ, ಅಕ್ಷರ ದಾಸೋಹ ವಿಭಾಗದ ಪವಿತ್ರವೇಣಿ, ಪದ್ಮಾವತಿ, ಚೆನ್ನಾವರ ಅಭ್ಯುದಯ ಯುವಕ ಮಂಡಲದ ಜತೆ ಕಾರ್ಯದರ್ಶಿ ಕೃತೇಶ್‌ ರೈ, ಹರೀಶ್‌ ರೈ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next