ಚನ್ನರಾಯಪಟ್ಟಣ/ಶ್ರವಣಬೆಳಗೊಳ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗೊಮ್ಮಟನಗರಿ, ಜೈನಕಾಶಿ ಎಂದೇ ಪ್ರಖ್ಯಾತ ಗೊಂಡಿರುವ ಶ್ರವಣಬೆಳಗೊಳದಲ್ಲಿ ಗೂಡಂಗಡಿ ಹಾವಳಿ ಹೆಚ್ಚಾಗಿದೆ. ಬೃಹತ್ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು ಚಿಕ್ಕದೇವರಾಜ ಒಡೆಯರ್ ನಿರ್ಮಾಣದ ಕಲ್ಯಾಣಿ ಮುಚ್ಚಿಹೋಗಿರುವುದಲ್ಲದೇ ಶ್ರೀಕ್ಷೇತ್ರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಫ್ಲೆಕ್ಸ್ ನಿಷೇಧಿಸಲಾಗಿದೆ, ಆದರೆ ಐತಿಹಾಸಿಕ ತಾಣವಾಗಿರುವ ಶ್ರವಣಬೆಳಗೊಳದಲ್ಲಿ ಫ್ಲೆಕ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ತಾಲೂಕು ಆಡಳಿತ ಮುಂದಾಗುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಫ್ಲೆಕ್ಸ್ ಹಾಕದಂತೆ ಪ್ರಚಾರ ಪ್ರಿಯರನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ.
ಕಲ್ಯಾಣಿ ಸುತ್ತ ಗೂಡಂಗಡಿ: ವಿಂಧ್ಯಗಿರಿ ಹಾಗೂ ಚಂದ್ರಗರಿ ನಡುವೆ ಚಿಕ್ಕದೇವರಾಜ ಒಡೆಯರ್ ಕಲ್ಯಾಣಿ ನಿರ್ಮಾಣ ಮಾಡಿದ್ದು, ಪ್ರತಿ ವರ್ಷ ಬೆಳಗೊಳದ ಅಧಿದೇವತೆ ಕೂಷ್ಮಾಂಡಿನಿ ದೇವಿ ಮತ್ತು ನೇಮಿನಾಥ ತೀಥಂರ್ಕರರ ಸರ್ವಾಹ¡ ಯಕ್ಷರ ತೆಪ್ಪೋತ್ಸವ ನಡೆಯುತ್ತದೆ. ಈ ಕಲ್ಯಾಣಿ ಪವಿತ್ರ ಜಲವನ್ನು ಪೂಜೆ ಬಳಸಲಾಗುತ್ತದೆ. ಆದರೆ ಈ ಕಲ್ಯಾಣಿ ಒಂದೆರಡು ಕಡೆ ಗೂಡಂಗಡಿಗಳು ನಿರ್ಮಾಣ ಆಗಿರುವುದಲ್ಲದೇ ಮತ್ತೂಂದು ಕಡೆಯಲ್ಲಿ ಕಲ್ಯಾಣಿ ಗೋಡೆಗೆ ಫ್ಲೆಕ್ಸ್‌ಗಳನ್ನು ಹಾಕಿರುವುದರಿಂದ ಶ್ರೀ ಕ್ಷೇತ್ರದಲ್ಲಿ ಕಲ್ಯಾಣಿ ಇರುವುದು ಪ್ರವಾಸಿಗರ ಕಣ್ಣಿಗೆ ಕಾಣುವುದಿಲ್ಲ.
ಪ್ರವಾಸಿಗರಿಗೆ ಕಿರಿಕಿರಿ: ಪ್ರವಾಸಿಗರು ಶ್ರೀ ಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಐತಿಹಾಸಿಕ ಬಸದಿಗಳು, ಚಂದ್ರಗಿರಿ, ವಿಂಧ್ಯಗಿರಿ ಇಲ್ಲವೇ ಕಲ್ಯಾಣಿ ಕಣ್ಣಿಗೆ ಕಾಣಬೇಕು. ಇದರ ಬದಲಾಗಿ ಶಾಲಾ ಕಾಲೇಜುಗಳ ಪ್ರಚಾರದ ಫ್ಲೆಕ್ಸ್‌ಗಳು, ರಾಜಕಾರಣಿಗಳಿಗೆ ಸ್ವಾಗ ಕೋರುವ ಹಾಗೂ ಹುಟ್ಟು ಹಬ್ಬಕ್ಕೆ ಶುಭ ಹಾರೈಸುವ ಫ್ಲೆಕ್ಸ್‌ಗಳು ಕಾಣಿಸುವುದಲ್ಲದೇ ಮೃತಪಟ್ಟವರ ಭಾವಚಿತ್ರದ ಫ್ಲೆಕ್ಸ್‌ಗಳು ವಿದ್ಯುತ್ ಕಂಬ ಇಲ್ಲವೇ ಬೆಟ್ಟದ ತಪ್ಪಲಿನಲ್ಲಿ ರಾರಾಜಿಸುತ್ತಿರುವುದು ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡಿದೆ.
ಪಾರ್ಕಿಂಗ್ ವ್ಯವಸ್ಥೆಯಿಲ್ಲ: ವಿಶ್ವ ವಿಖ್ಯಾತ ಕ್ಷೇತ್ರಕ್ಕೆ ರಾಜ್ಯವಲ್ಲದೇ ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ನಿತ್ಯವೂ ಆಗಮಿಸುತ್ತಾರೆ. ಇಂತಹ ಪ್ರವಾಸಿ ತಾಣದಲ್ಲಿ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬೆಟ್ಟದ ತಪ್ಪಲು ಹಾಗೂ ಕಲ್ಯಾಣಿ ಸುತ್ತ ಇರುವ ಗೂಡಂಗಡಿ ತೆರವು ಮಾಡಿ ಅಲ್ಲಿ ಪ್ರವಾಸಿಗರ ವಾಹನ ನಿಲ್ದಾಣಕ್ಕೆ ಅವಕಾಶ ಕಲ್ಪಿಸಿದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
ತೆರವಿಗೆ ಆಗ್ರಹ: ಇದಲ್ಲದೆ ಶ್ರೀಕ್ಷೇತ್ರದ ಒಳಗಿರುವ ರಸ್ತೆಯ ಎರಡೂ ಬದಿಯಲ್ಲಿರುವ ಕಟ್ಟಡದ ಮೇಲೆ ಖಾಸಗಿ ಸಂಸ್ಥೆಯವರು ಬೃಹತ್ ಕಟೌಟ್ ಹಾಕಿರುವು ದರಿಂದ ಬೆಟ್ಟಗಳು ಪ್ರವಾಸಿಗರ ಕಣ್ಣಿಗೆ ಕಾಣುವುದಿಲ್ಲ ಇವುಗಳನ್ನು ಆದಷ್ಟು ಬೇಗ ತೆರವು ಮಾಡಿ ಶ್ರವಣಬೆಳ ಗೊಳ ಸುಂದವಾಗಿ ಕಾಣುವಂತೆ ಮಾಡಬೇಕಾಗಿದೆ.
ಚಾರುಕೀರ್ತಿ ಭಟ್ಟಾರಕರು ಸೌಮ್ಯ ಸ್ವಭಾವದ ಜೊತೆಗೆ ಸಂಯಮವನ್ನು ಮೈಗೊಡಿಸಿಕೊಂಡಿದ್ದು ಎಲ್ಲಾ ರಾಜಕೀಯ ಪಕ್ಷದ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಎಂದಿಗೂ ಯಾವುದೇ ಜನಪ್ರತಿನಿಧಿಯನ್ನು ಭೇಟಿ ಮಾಡುವುದು, ಸುಖಾ ಸುಮ್ಮನೆ ಶ್ರೀಕ್ಷೇತ್ರಕ್ಕೆ ರಾಜ ಕಾರಣಿಯನ್ನು ಕರೆಸಿ ಒತ್ತಡ ಹಾಕುವುದಿಲ್ಲ. ಕ್ಷೇತ್ರಕ್ಕೆ ಆಗಬೇಕಿರುವ ಅಭಿವೃದ್ಧಿಯ ಬಗ್ಗೆ ಒಂದೆರಡು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತಾರೆ. ವೇದಿಕೆ ಸಮಾರಂಭದಲ್ಲಿ ಜಿಲ್ಲಾ ಮಂತ್ರಿ, ಕ್ಷೇತ್ರದ ಶಾಸಕ, ರಾಜ್ಯದ ಮುಖ್ಯ ಮಂತ್ರಿ ಹಾಗೂ ಕೇಂದ್ರದ ಮಂತ್ರಿಗಳ ಗಮನಕ್ಕೆ ತಂದರೂ ಸಂಬಂಧಪಟ್ಟವರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ.
ಸೌಮ್ಯ ಸ್ವಭಾವದ ಕರ್ಮಯೋಗಿ: ಜನಪ್ರತಿನಿಧಗಳು ಮುತುವರ್ಜಿಯಿಂದ ಕೆಲಸ ಮಾಡದೇ ಹೋದರೆ ತಮ್ಮ ಪಾಡಿಗೆ ತಾವು ಧಾರ್ಮಿಕ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಠದ ಬೆಳವಣಿಗೆ ಮತ್ತು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಆದರಾತಿಥ್ಯದ ಜೊತೆಗೆ ಶಾಸ್ತ್ರಗಳ ಅಧ್ಯಯನ, ಆತ್ಮಸಾಧನೆ ಹಾದಿ ಯಲ್ಲಿ ನಡೆಯುತ್ತಾರೆ. ಶ್ರೀಗಳು ಹೇಳಿದ್ದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕಿದೆ.