Advertisement

Chennammana kittur: ಕಿತ್ತೂರು ಉತ್ಸವಕ್ಕೆ ಕೆಲವೇ ದಿನ-ಸಿದ್ಧತೆ ಜೋರು

06:15 PM Oct 12, 2023 | Team Udayavani |

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ ಆಚರಣೆಗೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭರದ ಸಿದ್ದತೆ ಆರಂಭಿಸಿದೆ. ಕೋಟೆ, ರಸ್ತೆ, ಚರಂಡಿಗಳ ಸ್ವಚ್ಛತೆ, ಸುಣ್ಣ ಬಣ್ಣ ಬಳಿಯುವಿಕೆ ಕಾರ್ಯ ಚುರುಕಾಗಿದೆ.

Advertisement

ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುವ ಹಿನ್ನೆಲೆಯಲ್ಲಿ ಕೋಟೆ, ಮುಖ್ಯ ವೇದಿಕೆಗೆ ಹೋಗುವಾಗ ಆಗಬಹುದಾದ ಟ್ರಾಫಿಕ್‌ ಕಿರಿಕಿರಿ ತಪ್ಪಿಸಿ, ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳ ನಿರ್ಮಾಣ ಮತ್ತು ಸರ್ಕಾರಿ, ಖಾಸಗಿ ಮಳಿಗೆಗಳ ನಿರ್ಮಾಣದ ತಯಾರಿ ಈಗಾಗಲೇ ಆರಂಭವಾಗಿದೆ.

ಕಿತ್ತೂರಿನಲ್ಲಿ ಅಕ್ಟೋಬರ್‌ 23ರಿಂದ 25ರವರೆಗೆ ಮೂರು ದಿನಗಳ ಐತಿಹಾಸಿಕ ಕಿತ್ತೂರು ಉತ್ಸವ-2023ರಲ್ಲಿ ಕಿತ್ತೂರಿನ ಐತಿಹ್ಯ
ಸ್ಮರಣೆಯ ಜೊತೆಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಸೇರಿದಂತೆ ನಾಡಿನ ವಿವಿಧ ರಂಗಗಳ ಕಲೆ ಅನಾವರಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಉತ್ಸವದ ಯಶಸ್ವಿಗೆ ಅಗತ್ಯ ತಯಾರಿ ಚುರುಕಾಗಿದೆ.

ಪ್ರತಿ ವರ್ಷವೂ ಕಿತ್ತೂರು ಕೋಟೆಯ ಆವರಣದಲ್ಲಿಯೇ ಮುಖ್ಯ ವೇದಿಕೆ ನಿರ್ಮಿಸಿ, ಮುಖ್ಯ ಕಾರ್ಯಕ್ರಮಗಳನ್ನೆಲ್ಲ ಅಲ್ಲಿಯೇ
ಆಯೋಜಿಸಲಾಗುತ್ತದೆ. ಈ ವರ್ಷವೂ ಅದೇ ಸಂಪ್ರದಾಯ ಮುಂದುವರೆಯಲಿದ್ದು, ಮುಖ್ಯ ವೇದಿಕೆಯ ಸ್ವತ್ಛತೆ, ಶೃಂಗಾರ ಮತ್ತು ವೇದಿಕೆಯ ಮುಂಭಾಗದಲ್ಲಿ ಬೃಹದಾಕಾರದ ಶಾಮಿಯಾನ ನಿರ್ಮಾಣ ಕಾರ್ಯ ಆರಂಭವಾಗಿದೆ.

ಅರಳಿ ಕಟ್ಟೆಯ ವೃತ್ತದಲ್ಲಿ ಜನಸಂದಣಿ : ಕೋಟೆಯ ಮುಂಭಾಗವಾದ ಅರಳಿಕಟ್ಟೆ ಹತ್ತಿರ ಪ್ರತಿ ವರ್ಷ ಸಮಸ್ಯೆಗಳು ಉದ್ಭವಿಸುತ್ತವೆ. ಕೋಟೆ ವೀಕ್ಷಣೆಗಾಗಿ ತೆರಳುವ ನಾಡಿನ ಎಲ್ಲ ಅಭಿಮಾನಿಗಳು ಅರಳಿಕಟ್ಟೆ ಮಾರ್ಗವಾಗಿಯೇ ಹೋಗುವುದರಿಂದ ಸಹಜವಾಗಿ ಜನದಟ್ಟಣೆ ಆಗುತ್ತದೆ. ಹೀಗಾಗಿ ಜನಸಂದಣಿ ಮಧ್ಯೆ ಮಹಿಳೆ, ಯುವತಿಯರನ್ನು ಚುಡಾಯಿಸುವುದು, ಆಭರಣಗಳ ಕಳ್ಳತನ, ಕಿಸೆಗಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ. ಇದು ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಅರಳಿಕಟ್ಟೆ ವೃತ್ತದ ಬದಿಯಲ್ಲಿರುವ ಖಾಸಗಿ ಜಾಗದಲ್ಲಿಯೇ ಈಗಾಗಲೇ ಬಗೆ ಬಗೆಯ ಆ ಟದ ಜೋಕಾಲಿಗಳನ್ನು ನಿರ್ಮಿಸಲು ತಯಾರಿ ಆರಂಭವಾಗಿದೆ.

Advertisement

ಕೋಟೆ ಆವರಣಕ್ಕೆ ಸಂಪರ್ಕ ಕಲ್ಪಿಸುವ ಅರಳೀಕಟ್ಟೆ ವೃತ್ತದಿಂದ ಎರಡೂ ಬದಿಗಳ ರಸ್ತೆಗಳು ತೀರ ಚಿಕ್ಕದಾಗಿದ್ದು, ರಸ್ತೆಗೆ ಹೊಂದಿಕೊಂಡಂತೆ ಖಾಸಗಿ ಜಾಗೆಯಲ್ಲಿ ತಿನಿಸು ಕಟ್ಟೆಗಳು, ಆಟಿಕೆ ಅಂಗಡಿಗಳು, ಹಾಗೂ ಬೃಹದಾಕಾರದ ಜೋಕಾಲಿ,
ವಿವಿಧ ಆಟಗಳನ್ನು ಜೋಡಿಸಲಾಗುತ್ತಿದೆ.

ಮುಖ್ಯ ವೇದಿಕೆಯ ಕಾರ್ಯಕ್ರಮಕ್ಕೆ ಹೋಗುವ ಅ ಧಿಕಾರಿಗಳು, ಜನಪ್ರತಿನಿಧಿಗಳು, ಕಲಾವಿದರು ವಾಹನಗಳ ಮೂಲಕ
ಹೋಗುತ್ತಾರೆ. ಅಲ್ಲದೆ ಸಾರ್ವಜನಿಕರಿಗೆ ಕೋಟೆ ವೀಕ್ಷಣೆಗೆ ಸೇರಿದಂತೆ ಇನ್ನೂ ಅನೇಕ ವಾಹನಗಳು ಇದೇ ರಸ್ತೆಗಳ ಮೂಲಕ ಹೋಗುವುದರಿಂದ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಗಂಟೆಗಟ್ಟಲೆ ಕಸರತ್ತು ಮಾಡಬೇಕಾದ ದುಸ್ಥಿತಿ ಎದುರಾಗಿ ಕೋಟೆ ಆವರಣದಲ್ಲಿರುವ ಮುಖ್ಯ ವೇದಿಕೆಯ ಕಾರ್ಯಕ್ರಮಗಳನ್ನು ನೋಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ.

ಪ್ರತಿ ವರ್ಷವೂ ಇಲ್ಲಿ ಇದೇ ಸಮಸ್ಯೆ ತಲೆದೋರುತ್ತಿದ್ದರೂ ಟ್ರಾಫಿಕ್‌ ಪೊಲೀಸರು, ಸಿವಿಲ್‌ ಪೊಲೀಸರು, ಜಿಲ್ಲಾಡಳಿತ ಯಾವುದೇ
ರೀತಿಯಲ್ಲಿ ಸೂಕ್ತಕ್ರಮದ ಬಗ್ಗೆ ಯೋಚಿಸಿ ಯೋಜನೆ ರೂಪಿಸುತ್ತಿಲ್ಲ ಎಂದು ಕಿತ್ತೂರಿನ ಪ್ರಜ್ಞಾವಂತ ನಾಗಕರಿಕರು ಅ ಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉತ್ಸವಕ್ಕೆ ಇನ್ನು ಹಲವು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಇಲಾಖೆ ಅ ಧಿಕಾರಿಗಳು ಸುಗಮ ಸಂಚಾರ, ಕಿಸೆ ಕಳ್ಳತನ, ಸರಗಳ್ಳತನಕ್ಕೆ ಬ್ರೇಕ್‌ ಹಾಕಲು ಅರಳಿಕಟ್ಟೆ ವೃತ್ತದ ಬದಿಯಲ್ಲಿ ಅಂಗಡಿಗಳನ್ನು ನಿರ್ಮಿಸಲು ಅನುಮತಿ ನೀಡದೇ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಕೋಟೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಜೋಕಾಲಿ ಮತ್ತು ವ್ಯಾಪರ ಮಳಿಗೆಗಳನ್ನು ಹಾಕಿದರೆ ಸುಗಮ ಸಂಚಾರಕ್ಕೆ ಸಮಸ್ಯೆಗಳು
ಎದುರಾಗಲಿದ್ದು ಮುಂಚಿತವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಂಡರೆ ಯಾವುದೇ ತರಹದ ಆನಾಹುತಗಳಾಗದಂತೆ ತಡೆಯಬಹುದು.
*ವೀರೇಶ ಹಿರೇಮಠ,
ಯುವ ಮುಖಂಡರು, ಕಿತ್ತೂರು.

ಕೋಟೆ ರಸ್ತೆಯಲ್ಲಿ ಖಾಸಗಿ ಅಂಗಡಿಗಳನ್ನು ಹಾಕುವುದರಿಂದ ಜನದಟ್ಟಣೆ ಆಗುವುದು ಸಹಜ. ಅಲ್ಲಿ ಮಳಿಗೆ ಹಾಕುವವರಿಗೆ ಪರ್ಯಾಯ ಸ್ಥಳ ನೋಡಲಾಗುವುದು. ಸ್ಥಳಾವಕಾಶ ಆದರೆ ಅಲ್ಲಿಗೆ ಸ್ಥಳಾಂತರಿಸಲಾಗುವುದು.
*ಪ್ರಭಾವತಿ ಫಕೀರಪುರ,
ಬೈಲಹೊಂಗಲ ಉಪ ವಿಭಾಗಾಧಿಕಾರಿ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ

ಅರಳಿಕಟ್ಟಿಯಿಂದ ಕೋಟೆ ಆವರಣಕ್ಕೆ ಹೋಗುವ ರಸ್ತೆಯಲ್ಲಿ ಬಹಳ ಜನದಟ್ಟಣೆ ಆಗುತ್ತದೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ
ಬ್ಯಾರಿಕೇಡ್‌, ಸಿಸಿ ಕ್ಯಾಮೆರಾ, ಸೈನ್‌ ಬಾಕ್ಸ್‌ ಹಾಗೂ ಕತ್ತಲು ಇರುವ ಸ್ಥಳಗಳಲ್ಲಿ ಸೂಕ್ತ ಬೆಳಕು ಕಲ್ಪಿಸಲು ಲೈಟುಗಳನ್ನು ಒದಗಿಸಲು ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಮಾಡಲಾಗಿದೆ.
*ಮಹಾಂತೇಶ ಹೊಸಪೇಠೆ,
ವೃತ್ತ ನಿರೀಕ್ಷಕರು, ಆರಕ್ಷಕ ಠಾಣೆ ಕಿತ್ತೂರು

*ಬಸವರಾಜ ಚಿನಗುಡಿ

Advertisement

Udayavani is now on Telegram. Click here to join our channel and stay updated with the latest news.

Next