ಸುಳ್ಯ : ಚೆನ್ನಕೇಶವ ದೇವಾಲಯದ ಜಾತ್ರೆಯ ಹಿನ್ನೆಲೆಯಲ್ಲಿ ಜ. 8ರಂದು ಕಟ್ಟೆಪೂಜೆ ನಿಮಿತ್ತ ಜಟ್ಟಿಪಳ್ಳಕ್ಕೆ ಶ್ರೀ ದೇವರ ಮೆರವಣಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಜಾತಿ, ಮತ, ಧರ್ಮಭೇದವಿಲ್ಲದೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ನಗರ ಪಂಚಾಯತ್, ಚೈತನ್ಯ ಹಳೆ ವಿದ್ಯಾರ್ಥಿ ಸಂಘ, ಶ್ರೀರಾಮ ಭಜನ ಸಂಘ, ಕಪಿಲ ಯುವಕ ಮಂಡಲ, ಮಾನಸ ಮಹಿಳಾ ಮಂಡಲ, ಮಾನಸ ಯುವತಿ ಮಂಡಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಒಕ್ಕೂಟ, ಆಲೆಟ್ಟಿ ಮಾನಸ ಮಹಿಳಾ ಜ್ಞಾನವಿಕಾಸ ಆಶ್ರಯದಲ್ಲಿ ನಡೆದ ಸ್ವಚ್ಛತಾ ಕಾರ್ಯವನ್ನು ಸುಳ್ಯ ನಗರದ ಸ್ವಚ್ಛತಾ ರಾಯಭಾರಿ ಡಾ| ಕೆ.ವಿ. ಚಿದಾನಂದ ಮತ್ತು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು.
ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ ಅಡ್ಯಂತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಬ್ರಹ್ಮಕುಮಾರಿಸ್ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ಉಮಾದೇವಿ, ನ.ಪಂ. ಸದಸ್ಯ ಕೆ.ಎಂ. ಮುಸ್ತಾಫ, ಶ್ರೀ ಕ್ಷೇ.ಧ.ಗ್ರಾ.ಯೋ. ಮಡಿಕೇರಿ ತಾಲೂಕು ಯೋಜನಾಧಿಕಾರಿ ಸಂತೋಷ್ ರೈ, ಲಯನ್ಸ್ ಕಾರ್ಯದರ್ಶಿ ರಾಮಚಂದ್ರ ಪೆಲತ್ತಡ್ಕ, ಎನ್.ಎ. ಅಬ್ದುಲ್, ಮಾಧವ ಜಟ್ಟಿಪಳ್ಳ, ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಸುನಂದಾ ರೈ, ಜಟ್ಟಿಪಳ್ಳ ಕಪಿಲ ಯುವಕ ಮಂಡಲ ಅಧ್ಯಕ್ಷ ನಿತೇಶ್, ಎಸ್. ಎ. ಮಹಮ್ಮದ್ ಉಪಸ್ಥಿತರಿದ್ದರು.
ಜಟ್ಟಿಪಳ್ಳ ವಾರ್ಡ್ ಸದಸ್ಯ ರಮಾನಂದ ರೈ ಪ್ರಸ್ತಾವನೆಗೈದರು. ಜಟ್ಟಿಪಳ್ಳ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಸ್ವಾಗತಿಸಿದರು. ರಾಮ ಭಜನ ಸೇವಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎಂ.ಆರ್. ವಂದಿಸಿದರು. ರಘುನಾಥ ಜಟ್ಟಿಪಳ್ಳ ಮತ್ತು ಸಂತೋಷ್ ಕುಮಾರ್ ರೈ ಸಹಕರಿಸಿದರು. ದುಬೈ ಉದ್ಯೋಗಿ, ಜಟ್ಟಿಪಳ್ಳ ನಿವಾಸಿ ಮುನೀರ್ ಉಚಿತ ಕ್ಯಾಪ್ ನೀಡಿದರು.
ಜಾಗೃತಿ ಮೂಡಿಸಿ
ಸ್ವಚ್ಛತೆ ಅನ್ನುವುದು ಒಂದು ದಿನದ ಕೆಲಸ ಅಲ್ಲ. ಅದು ನಿತ್ಯ ನಿರಂತರ. ಮನೆಯಿಂದ ಆರಂಭಗೊಂಡು ಇಡೀ ದೇಶವನ್ನು ತಲುಪಿ ಸ್ವತ್ಛ ದೇಶ ರೂಪು ಗೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ಆಗಬೇಕು.
–
ಡಾ| ಕೆ.ವಿ. ಚಿದಾನಂದ
ಸುಳ್ಯ ನಗರ ಸ್ವಚ್ಛತಾ ರಾಯಭಾರಿ