Advertisement

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್‌ ವಿರುದ್ದ ನೆಟ್ಟಿಗರು ಗರಂ

04:21 PM Mar 30, 2023 | Team Udayavani |

ಚೆನ್ನೈ: ಕನ್ನಡದ ʼಮಫ್ತಿʼ ಸಿನಿಮಾದ ರಿಮೇಕ್‌ “ಪತ್ತುತಲಾ’ʼ ತಮಿಳಿನಲ್ಲಿ ಇಂದು ಅದ್ಧೂರಿಯಾಗಿ ರಿಲೀಸ್‌ ಆಗಿದೆ. ಬೆಳಗ್ಗಿನಿಂದಲೇ ಸಿಲಂಬರಸನ್‌ ಅಭಿಮಾನಿಗಳು ಸಿನಿಮಾ ನೋಡಲು ಟಿಕೆಟ್‌ ಖರೀದಿಸಿದ್ದಾರೆ. ಚೆನ್ನೈನ ಖ್ಯಾತ ಥಿಯೇಟರ್‌ ನಲ್ಲಿ ಒಂದಾಗಿರುವ ʼರೋಹಿಣಿ ಥಿಯೇಟರ್ʼ ನಲ್ಲಿ ಟಿಕೆಟ್‌ ವಿಚಾರವಾಗಿ ನಡೆದ ಘಟನೆಯೊಂದು ವೈರಲ್‌ ಆಗಿದೆ.

Advertisement

ಸಿಂಬು ಅಭಿಮಾನಿಯಾಗಿರುವ ಬುಡಕಟ್ಟು ಕುಟುಂಬವೊಂದು ಮಕ್ಕಳೊಂದಿಗೆ ಸಿನಿಮಾ ನೋಡಲು ಥಿಯೇಟರ್‌ ಗೆ ಬಂದಿದ್ದಾರೆ. ಟಿಕೆಟ್‌ ಖರೀದಿಸಿರುವ ಕುಟುಂಬ ಇನ್ನೇನು ಸಿನಿಮಾ ನೋಡಲು ಥಿಯೇಟರ್‌ ಗೆ ಹೋಗಬೇಕು ಎನ್ನುವಷ್ಟರಲ್ಲೇ ಥಿಯೇಟರ್‌ ನ ಸಿಬ್ಬಂದಿ ಕುಟುಂಬವನ್ನು ತಡೆದಿದೆ.

ನರಿಕುರವ ಬುಡಕಟ್ಟಿಗೆ ಸೇರಿದ ಕುಟುಂಬವನ್ನು ಥಿಯೇಟರ್‌ ಒಳಗೆ ಹೋಗಲು ತಡೆದ ಸಿಬ್ಬಂದಿಗಳನ್ನು ಇತರ ಜನರು ಯಾಕೆ ಅವರನ್ನು ತಡೆಯುತ್ತಿದ್ದೀರಾ ಎಂದಿದ್ದಾರೆ. ಈ ಬಗ್ಗೆ ಜನ ಥಿಯೇಟರ್‌ ಮ್ಯಾನೇಜ್‌ ಮೆಂಟ್‌ ಗೆ ಪ್ರಶ್ನೆ ಮಾಡಿದ್ದಾರೆ. ವಿಷಯ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದಂತೆ ಥಿಯೇಟರ್‌ ಸಿಬ್ಬಂದಿ ಬುಡಕಟ್ಟು ಕುಟುಂಬವನ್ನು ಥಿಯೇಟರ್‌ ಒಳಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಅಧಿವೇಶನ ನಡೆಯುತ್ತಿರುವಾಗ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ

ಥಿಯೇಟರ್‌ ಸ್ಪಷ್ಟೀಕರಣ:

Advertisement

“ಇಂದು ಬೆಳಿಗ್ಗೆ “ಪತ್ತುತಲಾ’ʼ ಸಿನಿಮಾ ವೀಕ್ಷಿಸಲು ಕುಟುಂಬವೊಂದು ನಮ್ಮ ಥಿಯೇಟರ್‌ ಗೆ ಬಂದಿದೆ. ಅವರನ್ನು ನಮ್ಮ ಸಿಬ್ಬಂದಿಗಳು ತಡೆದಿದ್ದಾರೆ. ಚಲನಚಿತ್ರಕ್ಕೆ ಯು/ಎ ಸೆನ್ಸಾರ್ ಮಾಡಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾನೂನಿನ ಪ್ರಕಾರ ಯು/ಎಪ್ರಮಾಣೀಕರಿಸಿದ ಯಾವುದೇ ಚಲನಚಿತ್ರವನ್ನು ವೀಕ್ಷಿಸಲು ಅನುಮತಿಸಲಾಗುವುದಿಲ್ಲ. ಇದೇ ಕಾರಣದಿಂದ ಟಿಕೆಟ್ ತಪಾಸಣೆ ಸಿಬ್ಬಂದಿ ಅವರ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದೆ.

ಆದರೆ ನೆಟ್ಟಿಗರು ಈ ಬಗ್ಗೆ ಟ್ವಟಿರ್‌ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಕಾನೂನನ್ನು ಬದಿಗಿಟ್ಟು ಅದೇ ಶೋನಲ್ಲಿ ಕುಟುಂಬವನ್ನು ಸಿನಿಮಾ ನೋಡಲು ಪ್ರವೇಶ ಕೊಟ್ಟಿದ್ದಾರೆ. ಕುಟುಂಬ ಖುಷಿಯಿಂದ ಸಿನಿಮಾ ನೋಡುವ ಬಗ್ಗೆ ಥಿಯೇಟರ್‌ ಮ್ಯಾನೇಜ್‌ ಮೆಂಟ್‌ ವಿಡಿಯೋ ಹಂಚಿಕೊಂಡಿದೆ.

12 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರೊಂದಿಗೆ ಬಂದರೆ ಅವರಿಗೆ ಪ್ರವೇಶ ನೀಡಬಹುದು ಎಂದು ಯು/ಎ ಪ್ರಮಾಣೀಕೃತ ʼದರ್ಬಾರ್ʼ ವೀಕ್ಷಿಸಲು ಧನುಷ್ ಅವರ ಪುತ್ರರಾದ ಯಾತ್ರಾ ಮತ್ತು ಲಿಂಗ ಬಂದಿರುವ ಫೋಟೋವನ್ನು ನೆಟ್ಟಿಗರು ಹಂಚಿಕೊಂಡು ಥಿಯೇಟರ್‌ ಮ್ಯಾನೇಜ್‌ ಮೆಂಟ್‌ ಗೆ ಪ್ರಶ್ನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next