Advertisement

ನಟ ಅಜಿತ್ ಮನೆ ಎದುರು ಬೆಂಕಿ ಹಚ್ಚಿಕೊಂಡ ಮಹಿಳೆ

07:52 PM Oct 05, 2021 | Team Udayavani |

ಚೆನ್ನೈ: ಕಾಲಿವುಡ್ ನಟ ಅಜಿತ್ ಮನೆ ಮುಂದೆ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ಫರ್ಜಾನಾ ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Advertisement

2020ರಲ್ಲಿ ಅಜಿತ್​ ಹಾಗೂ ಅವರ ಪತ್ನಿ ಶಾಲಿನಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಈಕೆ ಅಜಿತ್​ ದಂಪತಿಯ ವಿಡಿಯೋ ಚಿತ್ರೀಕರಿಸಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದಾದ ಬಳಿಕ ಆಸ್ಪತ್ರೆ ನಿಯಮಾವಳಿಯ ಅನುಸಾರ ಫರ್ಜಾನಾರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದಾದ ಬಳಿಕ ಶಾಲಿನಿಯನ್ನು ಸಂಪರ್ಕಿಸಿದ್ದ ಫರ್ಜಾನಾ ತಮ್ಮ ಕೆಲಸ ವಾಪಸ್​ ಸಿಗುವಂತೆ ಮಾಡಿ ಎಂದು ಕೇಳಲು ಯತ್ನಿಸಿದರೂ ಅದು ಪ್ರಯೋಜನವಾಗಿರಲಿಲ್ಲ.

ಮತ್ತೊಬ್ಬ ಮಹಿಳೆಯ ಜೊತೆ ಅಜಿತ್​ ನಿವಾಸಕ್ಕೆ ಆಗಮಿಸಿದ ಫರ್ಜಾನಾ ಅಜಿತ್​ ಕುಮಾರ್ ನಿವಾಸದ ಎದುರು ನಿಮ್ಮಿಂದಾಗಿ ನನ್ನ ಕೆಲಸ ಹೋಯ್ತು ಎಂದು ಕಿರಿಚಿದ್ದಾಳೆ. ಬಳಿಕ ನಟ ಅಜಿತ್​ ಕುಮಾರ್​ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next