Advertisement

ಚೆನ್ನೈ-ಹೈದರಾಬಾದ್ ಕಾಳಗ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ

07:05 PM Oct 02, 2020 | Mithun PG |

ದುಬೈ: ಐಪಿಎಲ್ 13 ನೇ ಆವೃತ್ತಿಯ 14ನೇ ಪಂದ್ಯದಲ್ಲಿ ಚೆನ್ನೈ ಮತ್ತು ಹೈದರಾಬಾದ್ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ  ವಾರ್ನರ್  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Advertisement

ಎರಡೂ ತಂಡಗಳು ಈವರೆಗೂ 12 ಬಾರಿ ಮುಖಾಮುಖಿಯಾಗಿದ್ದು 09 ರಲ್ಲಿ ಧೋನಿ ಪಡೆ ಗೆಲುವಿನ ನಗೆ ಬೀರಿದೆ. ಕೇವಲ 3ರಲ್ಲಿ ಮಾತ್ರ ಹೈದರಬಾದ್ ಜಯ ಸಾಧಿಸಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಎಂ ನಲ್ಲಿ ಇಂದಿನ ಪಂದ್ಯ ನಡೆಯುತ್ತಿದ್ದು, ಇಲ್ಲಿ ಈ ಬಾರಿ ನಡೆದ 6 ಮ್ಯಾಚ್ ನಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದಿದೆ.

ಚೆನ್ನೈ ಗೆ ಇಂದು ಅಂಬಟಿ ರಾಯುಡು ಮತ್ತು ಡ್ವೇನ್ ಬ್ರಾವೋ ಬಲ ತುಂಬಲಿದ್ದಾರೆ. ಉಭಯ ತಂಡಗಳು ಕೂಡ 3 ಪಂದ್ಯಗಳಲ್ಲಿ ತಲಾ ಎರಡರಲ್ಲಿ ಸೋಲುಂಡು, ಅಂಕಪಟ್ಟಿಯಲ್ಲಿ ಕ್ರಮವಾಗಿ ಕೊನೆ 2 ಸ್ಥಾನದಲ್ಲಿದೆ.

ಆಡುವ ಹನ್ನೊಂದರ ಬಳಗ:

Advertisement

ಚೆನ್ನೈ ಸೂಪರ್ ಕಿಂಗ್ಸ್:  ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಕೇದಾರ್ ಜಾಧವ್, ಎಂ.ಎಸ್. ಧೋನಿ (ನಾಯಕ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಪಿಯೂಷ್ ಚಾವ್ಲಾ, ದೀಪಕ್ ಚಹರ್

ಸನ್‌ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ , ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಪ್ರಿಯಮ್ ಗರ್ಗ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕೆ ಖಲೀಲ್ ಅಹ್ಮದ್, ಟಿ ನಟರಾಜನ್

 

Advertisement

Udayavani is now on Telegram. Click here to join our channel and stay updated with the latest news.

Next