Advertisement

ಹೈವೋಲ್ಟೇಜ್ ಮ್ಯಾಚ್: ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ

07:05 PM Oct 10, 2020 | Mithun PG |

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ಹೈವೋಲ್ಟೇಜ್ ಕದನ ನಡೆಯುತ್ತಿದ್ದು ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್  ಆಯ್ದುಕೊಂಡಿದ್ದಾರೆ.

Advertisement

ಇಂದಿನ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಎರಡೂ ತಂಡಗಳೂ ಭರ್ಜರಿ ಜಯದ ವಿಶ್ವಾಸದಲ್ಲಿದೆ. ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ ಆರ್ ಸಿಬಿ 3ರಲ್ಲಿ ಗೆದ್ದಿದ್ದು, 2ರಲ್ಲಿ ಸೋತಿದೆ. ಚೆನ್ನೈ ಕೂಡ ಆಡಿರುವ 6 ಪಂದ್ಯದಲ್ಲಿ 2ರಲ್ಲಿ ಮಾತ್ರ ಗೆದ್ದಿದ್ದು, ಫ್ಲೇ ಆಪ್ ದೃಷ್ಟಿಯಿಂದ ಇತ್ತಂಡಗಳಿಗೂ ಇಂದಿನ ಪಂದ್ಯ ಮಹತ್ವದ್ದಾಗಿದೆ.

ಆರ್ ಸಿಬಿ ತಂಡ ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿದೆ. ಆದರೇ ಅಗ್ರ ಕ್ರಮಾಂಕದಲ್ಲಿ ಸ್ಥಿರತೆಯ ಪ್ರದರ್ಶನ ಮೂಡಿ ಬರುತ್ತಿಲ್ಲ. ಪಡಿಕ್ಕಲ್, ಫಿಂಚ್, ಎಬಿಡಿ, ಮೋಯಿನ್ ಆಲಿ, ವಾಷಿಂಗ್ಟನ್ ಆರ್ಭಟಿಸಿದರೆ ಪಂದ್ಯ ಗೆಲ್ಲುವುದು ನಿಶ್ಛಿತ. ನಾಯಕ ಕೊಹ್ಲಿ ಉತ್ತಮ ಲಯದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಇನ್ನು ಬೌಲಿಂಗ್ ನಲ್ಲಿ ಸ್ಪಿನ್ನರ್ ಚಹಲ್ ಭರವಸೆ ಮೂಡಿಸಿದ್ದಾರೆ.

ಚೆನ್ನೈ ತಂಡ ಕೂಡ ಬಲಿಷ್ಠವಾಗಿದ್ದು, ವಾಟ್ಸನ್, ಡುಪ್ಲೆಸಿ, ರಾಯುಡು, ನಾಯಕ ಧೋನಿ ಸ್ಥಿರತೆ ಕಾಯ್ದುಕೊಂಡರೆ ಗೆಲ್ಲುವ ಅವಕಾಶವಿದೆ. ಡ್ವೇನ್ ಬ್ರಾವೋ, ಶಾರ್ದೂಲ್, ದೀಪಕ್ ಚಹರ್ ಬೌಲಿಂಗ್ ಶಕ್ತಿಯಾಗಿದ್ದಾರೆ.

ಎರಡು ತಂಡಗಳೂ ಈ ಮೊದಲು 25 ಬಾರಿ ಮುಖಾಮುಖಿಯಾಗಿದ್ದು, 8 ಬಾರಿ ಆರ್ ಸಿಬಿ ಮತ್ತು 16ರಲ್ಲಿ ಸಿಎಸ್ ಕೆ ಜಯಗಳಿಸಿದೆ.

Advertisement

ತಂಡ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಗುರ್ ಕೀರತ್  ಸಿಂಗ್ ಮನ್, ಶಿವಮ್ ದುಬೆ, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಯುಜ್ವೇಂದ್ರ ಚಹಲ್

ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಎಂ.ಎಸ್. ಧೋನಿ (ನಾಯಕ), ಎನ್ ಜಗದೀಸನ್, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಕರಣ್ ಶರ್ಮಾ

 

 

Advertisement

Udayavani is now on Telegram. Click here to join our channel and stay updated with the latest news.

Next