Advertisement

ಡೆಲ್ಲಿ ಫೈನಲ್ ಕನಸು ಛಿದ್ರ; ಫೈನಲ್‌ ಗೆ ಚೆನ್ನೈ

03:33 AM May 11, 2019 | Team Udayavani |

ವಿಶಾಖಪಟ್ಟಣ: ಮೊದಲ ಸಲ ಐಪಿಎಲ್ ಫೈನಲಿಗೇರುವ ಡೆಲ್ಲಿ ಕನಸು ಶುಕ್ರವಾರ ರಾತ್ರಿ ವಿಶಾಖಪಟ್ಟಣದಲ್ಲಿ ಛಿದ್ರಗೊಂಡಿದೆ. ಹಾಲಿ ಚಾಂಪಿಯನ್‌ ಚೆನ್ನೈ 6 ವಿಕೆಟ್ ಜಯಭೇರಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ಚೆನ್ನೈ-ಮುಂಬೈ ಪ್ರಶಸ್ತಿ ಸಮರದಲ್ಲಿ ಎದುರಾಗಲಿವೆ.

Advertisement

ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 9 ವಿಕೆಟಿಗೆ 147 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತು. ಇದನ್ನು ಸುಲಭದಲ್ಲಿ ಬೆನ್ನಟ್ಟಿಕೊಂಡು ಹೋದ ಚೆನ್ನೈ19 ಓವರ್‌ಗಳಲ್ಲಿ 4 ವಿಕೆಟಿಗೆ 151 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಆರಂಭಿಕರಾದ ಫಾ ಡು ಪ್ಲೆಸಿಸ್‌ ಮತ್ತು ಶೇನ್‌ ವಾಟ್ಸನ್‌ ಇಬ್ಬರೂ 50 ರನ್‌ ಪೇರಿಸಿ ಚೆನ್ನೈಗೆ ಮೇಲುಗೈ ಒದಗಿಸಿದರು. ವಾಟ್ಸನ್‌ 32 ಎಸೆತ ಎದುರಿಸಿ 4 ಸಿಕ್ಸರ್‌, 3 ಫೋರ್‌ ಸಿಡಿಸಿದರು. ಡು ಪ್ಲೆಸಿಸ್‌ ಅವರ 39 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 1 ಸಿಕ್ಸರ್‌ ಸೇರಿತ್ತು.

ಜೋಶ್‌ ತೋರದ ಡೆಲ್ಲಿ
ಡೆಲ್ಲಿ ಯಾವ ಹಂತದಲ್ಲೂ ಟಿ20 ಜೋಶ್‌ ತೋರಲಿಲ್ಲ. ಅಯ್ಯರ್‌ ಪಡೆಯ ಆಟ ಕ್ವಾಲಿಫೈಯರ್‌ ಪಂದ್ಯದ ಮಟ್ಟದಿಂದ ಎಷ್ಟೋ ಹಿಂದಿತ್ತು. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಎಡವಿದ್ದ ಚೆನ್ನೈ ಬಿಗಿ ಬೌಲಿಂಗ್‌ ದಾಳಿ ಮೂಲಕ ಡೆಲ್ಲಿಗೆ ಕಡಿವಾಣ ಹಾಕಿತು. ಬ್ರಾವೊ, ಜಡೇಜ, ಚಹರ್‌, ತಾಹಿರ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಡೆಲ್ಲಿ ಸರದಿಯಲ್ಲಿ ಯಾರಿಂದಲೂ ದೊಡ್ಡ ಜತೆಯಾಟ ದಾಖಲಾಗಲಿಲ್ಲ. 38 ರನ್‌ ಮಾಡಿದ ರಿಷಭ್‌ ಪಂತ್‌ ಅವರದೇ ಸರ್ವಾಧಿಕ ಮೊತ್ತ. ಆದರೆ ಅವರಿಗೂ ಇಲ್ಲಿ ದಿಗ್ಬಂಧನ ವಿಧಿಸಲಾಯಿತು. 25 ಎಸೆತ ಎದುರಿಸಿದ ಪಂತ್‌ ಸಿಡಿಸಿದ್ದು ಕೇವಲ 2 ಬೌಂಡರಿ ಹಾಗೂ ಒಂದು ಸಿಕ್ಸರ್‌.

Advertisement

ಎಲಿಮಿನೇಟರ್‌ ಪಂದ್ಯದಲ್ಲಿ ಮಿಂಚಿದ ಪೃಥ್ವಿ ಶಾ ಇಲ್ಲಿ ಸಿಡಿಯಲು ವಿಫ‌ಲರಾದರು. ಅವರ ಗಳಿಕೆ ಕೇವಲ 5 ರನ್‌. ಶಿಖರ್‌ ಧವನ್‌ ಸಿಡಿಯುವ ಸೂಚನೆಯಿತ್ತು ಅಷ್ಟೇ ಬೇಗ ವಾಪಸಾದರು. ಧವನ್‌ ಗಳಿಕೆ 14 ಎಸೆತಗಳಿಂದ 18 ರನ್‌ (3 ಬೌಂಡರಿ). ವನ್‌ಡೌನ್‌ನಲ್ಲಿ ಬಂದ ಕಾಲಿನ್‌ ಮುನ್ರೊ 24 ಎಸೆತ ನಿಭಾಯಿಸಿ 27 ರನ್‌ ಹೊಡೆದರು (4 ಬೌಂಡರಿ).

ಶ್ರೇಯಸ್‌ ಅಯ್ಯರ್‌ ಕಪ್ತಾನನ ಆಟವಾಡುವಲ್ಲಿ ಮತ್ತೂಮ್ಮೆ ವಿಫ‌ಲರಾದರು. 13 ರನ್ನಿಗೆ 18 ಎಸೆತ ತೆಗೆದುಕೊಂಡರು. ಹೊಡೆದದ್ದು ಒಂದೇ ಬೌಂಡರಿ. ಅಕ್ಷರ್‌ ಪಟೇಲ್ ಆಟ ಮೂರೇ ರನ್ನಿಗೆ ಮುಗಿಯಿತು.

ಆಲ್ರೌಂಡರ್‌ ರುದರ್‌ಫೋರ್ಡ್‌, ಕೀಮೊ ಪೌಲ್ ಕೂಡ ಕ್ಲಿಕ್‌ ಆಗಲಿಲ್ಲ. ಕೊನೆಯಲ್ಲಿ ಇಶಾಂತ್‌ ಶರ್ಮ 3 ಎಸೆತಗಳಿಂದ 10 ರನ್‌ (1 ಬೌಂಡರಿ, 1 ಸಿಕ್ಸರ್‌) ಬಾರಿಸಿ ಮಿಂಚಿದರು. ಇದು ಐಪಿಎಲ್ನಲ್ಲಿ ಅವರ ಅತ್ಯಧಿಕ ರನ್‌ ಆಗಿದೆ.

ಚೆನ್ನೈ ಒಂದು ಬದಲಾವಣೆ
ಈ ಪಂದ್ಯಕ್ಕಾಗಿ ಚೆನ್ನೈ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿತು. ಮುಂಬೈ ವಿರುದ್ಧ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಿದ್ದ ಮುರಳಿ ವಿಜಯ್‌ ಅವರನ್ನು ಕೈಬಿಟ್ಟು ಬೌಲರ್‌ ಶಾರ್ದೂಲ್ ಠಾಕೂರ್‌ ಅವರಿಗೆ ಅವಕಾಶ ನೀಡಿತು. ಡೆಲ್ಲಿ ತಂಡದಲ್ಲಿ ಯಾವುದೇ ಪರಿವರ್ತನೆಯಾಗಲಿಲ್ಲ. ಹೈದರಾಬಾದ್‌ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ಆಡಿದ್ದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಿತು.

ಸ್ಕೋರ್‌ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಎಲ್‌ಬಿಡಬ್ಲ್ಯು ಚಹರ್‌ 5
ಶಿಖರ್‌ ಧವನ್‌ ಸಿ ಧೋನಿ ಬಿ ಹರ್ಭಜನ್‌ 18
ಕಾಲಿನ್‌ ಮುನ್ರೊ ಸಿ ಬ್ರಾವೊ ಬಿ ಜಡೇಜ 27
ಶ್ರೇಯಸ್‌ ಅಯ್ಯರ್‌ ಸಿ ರೈನಾ ಬಿ ತಾಹಿರ್‌ 13
ರಿಷಭ್‌ ಪಂತ್‌ ಸಿ ಬ್ರಾವೊ ಬಿ ಚಹರ್‌ 38
ಅಕ್ಷರ್‌ ಪಟೇಲ್‌ ಸಿ ತಾಹಿರ್‌ ಬಿ ಬ್ರಾವೊ 3
ರುದರ್‌ಫೋರ್ಡ್‌ ಸಿ ವಾಟ್ಸನ್‌ ಬಿ ಹರ್ಭಜನ್‌ 10
ಕೀಮೊ ಪೌಲ್‌ ಬಿ ಬ್ರಾವೊ 3
ಅಮಿತ್‌ ಮಿಶ್ರಾ ಔಟಾಗದೆ 6
ಟ್ರೆಂಟ್‌ ಬೌಲ್ಟ್ ಬಿ ಜಡೇಜ 6
ಇಶಾಂತ್‌ ಶರ್ಮ ಔಟಾಗದೆ 10
ಇತರ 8
ಒಟ್ಟು (9 ವಿಕೆಟಿಗೆ) 147
ವಿಕೆಟ್‌ ಪತನ: 1-21, 2-37, 3-57, 4-75, 5-80, 6-102, 7-119, 8-125, 9-137.
ಬೌಲಿಂಗ್‌:
ದೀಪಕ್‌ ಚಹರ್‌ 4-0-28-2
ಶಾದೂìಲ್‌ ಠಾಕೂರ್‌ 1-0-13-0
ಹರ್ಭಜನ್‌ ಸಿಂಗ್‌ 4-0-31-2
ರವೀಂದ್ರ ಜಡೇಜ 3-0-23-2
ಇಮ್ರಾನ್‌ ತಾಹಿರ್‌ 4-0-28-1
ಡ್ವೇನ್‌ ಬ್ರಾವೊ 4-0-19-2

ಚೆನ್ನೈ ಸೂಪರ್‌ ಕಿಂಗ್ಸ್‌
ಫಾ ಡು ಪ್ಲೆಸಿಸ್‌ ಸಿ ಪೌಲ್‌ ಬಿ ಬೌಲ್ಟ್ 50
ಶೇನ್‌ ವಾಟ್ಸನ್‌ ಸಿ ಬೌಲ್ಟ್ ಬಿ ಮಿಶ್ರಾ 50
ಸುರೇಶ್‌ ರೈನಾ ಬಿ ಪಟೇಲ್‌ 11
ಅಂಬಾಟಿ ರಾಯುಡು ಔಟಾಗದೆ 20
ಎಂ.ಎಸ್‌. ಧೋನಿ ಸಿ ಪೌಲ್‌ ಬಿ ಇಶಾಂತ್‌ 9
ಡ್ವೇನ್‌ ಬ್ರಾವೊ ಔಟಾಗದೆ 4
ಇತರ 7
ಒಟ್ಟು (19 ಓವರ್‌ಗಳಲ್ಲಿ 4 ವಿಕೆಟಿಗೆ) 151
ವಿಕೆಟ್‌ ಪತನ: 1-61, 2-109, 3-127, 4-146.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-20-1
ಇಶಾಂತ್‌ ಶರ್ಮ 4-0-28-1
ಅಕ್ಷರ್‌ ಪಟೇಲ್‌ 4-0-32-1
ಅಮಿತ್‌ ಮಿಶ್ರಾ 4-0-21-1
ಕೀಮೊ ಪೌಲ್‌ 3-0-49-0

Advertisement

Udayavani is now on Telegram. Click here to join our channel and stay updated with the latest news.

Next