ಚೆನ್ನೈ: ಈ ಬಾರಿಯ ಐಪಿ ಎಲ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಕೈಯಲ್ಲಿ ಸೋಲನ್ನು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಮವಾರ ತನ್ನ ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು ಗೆಲುವಿನ ನಿರೀಕ್ಷೆಯಲ್ಲಿದೆ.
ತಮ್ಮ ನೆಚ್ಚಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಧೋನಿ ಪಡೆ ತವರಿನ ಅಭಿಮಾನಿಗಳ ಬೆಂಬಲದೊಂದಿಎ ಭರ್ಜರಿ ಆಟದ ಪ್ರದರ್ಶನ ನೀಡುವ ಸಾಧ್ಯತೆಯಿದ್ದು ಗೆಲುವಿನ ಟ್ರ್ಯಾಕ್‌ಗೆ
ಮರಳುವ ವಿಶ್ವಾಸದಲ್ಲಿದೆ. ನಾಲ್ಕು ಬಾರಿಯ ಚಾಂಪಿಯನ್ ಆಗಿರುವ ಧೋನಿ ಪಡೆ ನಾಲ್ಕು ವರ್ಷಗಳ ಬಳಿಕ ಚಿಪಾಕ್‌ಗೆ ಮರಳಿದೆ.
ಆರಂಭಿಕ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ಉಳಿದ ಆಟಗಾರರು ನಿರೀಕ್ಷಿತ ನಿರ್ವಹಣೆ ನೀಡಲು ವಿಫಲರಾಗಿದ್ದರು. ಇದರಿಂದ ಉತ್ತಮ ಮೊತ್ತ ಪೇರಿಸಲು ಚೆನ್ನೈಗೆ ಸಾಧ್ಯವಾಗಿರಲಿಲ್ಲ. ಆದರೆ ತವರಿನ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಚೆನ್ನೈ ತಂಡ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
16.25 ಕೋಟಿ ರೂ.ಗಳಿಗೆ ಖರೀದಿ ಸಿದ ಇಂಗ್ಲೆಂಡಿನ ಸೂಪರ್‌ಸ್ಟಾರ್ ಬೆನ್ ಸ್ಟೋಕ್ಸ್ ತನ್ನ ಸಾಮರ್ಥ್ಯಕ್ಕೆ ತಕ್ಕೆಂತೆ ಆಡಬೇಕಾಗಿದೆ. ಅವರಲ್ಲದೇ ಧೋನಿ, ರವೀಂದ್ರ ಜಡೇಜ, ರಹಾನೆ, ರಾಯುಡು ಉತ್ತಮವಾಗಿ ಆಡಿದರೆ ಚೆನ್ನೈ ಉತ್ತಮ ಮೊತ್ತ ಪೇರಿಸುವಲ್ಲಿ ಸಂದೇಹವಿಲ್ಲ. ಬೌಲಿಂಗ್‌ನಲ್ಲಿ ಜಡೇಜ, ಮಿಚೆಲ್ ಸ್ಯಾಂಟ್ನರ್ ಮೊದಲ ಪಂದ್ಯದಲ್ಲಿ ನಿರೀಕ್ಷಿತ ನಿರ್ವಹಣೆ ನೀಡಿಲ್ಲ. ಅವರು ಈ ಪಂದ್ಯದಲ್ಲಾದರೂ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆ ಮಾಡಲಾಗಿದೆ. ಈ ಪಂದ್ಯಕ್ಕಾಗಿ ಚೆನ್ನೈ ಇನ್ನೋರ್ವ ಸ್ಪಿನ್ನರ್ ಅನ್ನು ಆಡಿಸುವ ಸಾಧ್ಯತೆಯಿದೆ. ಲಕ್ನೋ ಬಲಿಷ್ಠ
ಚೆನ್ನೈ ತಂಡದ ಎದುರಾಳಿ ಆಗಿ ರುವ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬಲಿಷ್ಠವಾಗಿದೆ. ಕೈಲ್ ಮೇಯರ್ ಮತ್ತು ಬೌಲಿಂಗ್‌ನಲ್ಲಿ ಮಾರ್ಕ್ ವುಡ್ ಅವರ ಅಮೋಘ ನಿರ್ವಹಣೆಯಿಂದ ಲಕ್ನೋ ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 50 ರನ್ನುಗಳಿಂದ ಸೋಲಿಸಿದ ಸಾಧನೆ ಮಾಡಿದೆ. ಡೆಲ್ಲಿ ವಿರುದ್ಧ ಮೇಯರ್ ಅವರ ಆಟ ಮನಮೋಹಕವಾಗಿತ್ತು. ವೆಸ್ಟ್‌ಇಂಡೀಸ್‌ನ ಮೇಯರ್ ಸಿಕ್ಸರ್‌ಗಳ ಸುರಿಮಳೆಗೈದು ಕೇವಲ 38 ಎಸೆತಗಳಿಂದ 73 ರನ್ ಹೊಡೆದಿದ್ದರು.
ಲಕ್ನೋ ಬೌಲಿಂಗ್‌ನಲ್ಲೂ ಬಲಿಷ್ಠವಾ ಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಾರ್ಕ್ ವುಡ್ 5 ವಿಕೆಟ್ ಕಿತ್ತು ಗಮನ ಸೆಳೆದಿದ್ದರು. ಅವರ ದಾಳಿಗೆ ಕುಸಿದ ಡೆಲ್ಲಿ ಸೋಲನ್ನು ಕಂಡಿತ್ತು. ಅವರಲ್ಲದೇ ರವಿ ಬಿಷ್ಣೋಯಿ, ಕೆ. ಗೌತಮ್, ಜೈದೇವ್ ಉನಾದ್ಕತ್ ನಿಖರ ದಾಳಿ ಸಂಘಟಿಸಿದರೆ ಲಕ್ನೋ ಮತ್ತೆ ಗೆಲ್ಲುವ ಸಾಧ್ಯತೆಯಿದೆ.
ಸ್ಥಳ: ಚೆನ್ನೈ
ಆರಂಭ: 7.30