Advertisement

ಐಪಿಎಲ್‌: ಚೆನ್ನೈ, ರಾಜಸ್ಥಾನ್‌ ತಂಡಗಳ ನಿಷೇಧ ಮುಕ್ತಾಯ

03:20 AM Jul 15, 2017 | |

ಮುಂಬೈ: ರಾಜಸ್ಥಾನ್‌ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಮೇಲಿನ ಎರಡು ವರ್ಷಗಳ ಐಪಿಎಲ್‌ ನಿಷೇಧ ಮುಕ್ತಾಯಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಂಡಗಳು 2018ರಿಂದ ಐಪಿಎಲ್‌ನಲ್ಲಿ ಪಾಲ್ಗೊಳ್ಳಬಹುದು. 2013ರ ಐಪಿಎಲ್‌ನಲ್ಲಿ ಈ ತಂಡಗಳ ಮಾಲಿಕರೇ ಬೆಟ್ಟಿಂಗ್‌ ನಡೆಸಿದ ಕಾರಣ ಈ ಎರಡೂ ತಂಡಗಳನ್ನು ಸರ್ವೋಚ್ಚ ನ್ಯಾಯಾಲಯ ನಿಷೇಧಿಸಿತ್ತು. ಚೆನ್ನೈ ಮುಖ್ಯಸ್ಥರಾಗಿದ್ದ ಗುರುನಾಥ್‌ ಮೈಯಪ್ಪನ್‌, ರಾಜಸ್ಥಾನ್‌ ಸಹ ಮಾಲಿಕರಾಗಿದ್ದ ರಾಜ್‌ ಕುಂದ್ರಾರನ್ನು ಆಜೀವ ನಿಷೇಧಿಸಿದೆ.

Advertisement

2018ರ ಐಪಿಎಲ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಹೊಸತಾಗಿ ಹರಾಜು ನಡೆಯಲಿದೆ. ಈಗಿರುವ ತಂಡಗಳ ಆಟಗಾರರನ್ನೆಲ್ಲ ವಿಸರ್ಜಿಸಲಾಗುತ್ತದೆ. ಕೆಲವು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಸಿಗಲಿದೆಯೇ ಎನ್ನುವುದು ಗೊತ್ತಾಗಿಲ್ಲ. ಈ ವೇಳೆ ಧೋನಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಕಿಂಗ್ಸ್‌ ಗರಿಷ್ಠ ಯತ್ನ ಮಾಡಲಿದೆ. 2016ರ ಆವೃತ್ತಿವರೆಗೆ ಧೋನಿ ಚೆನ್ನೈ ಪರವೇ ಆಡಿದ್ದರು. ಚೆನ್ನೈ ನಿಷೇಧಗೊಂಡಿದ್ದರಿಂದ ಅನಿವಾರ್ಯವಾಗಿ 2 ವರ್ಷಗಳ ಮಟ್ಟಿಗೆ ಪುಣೆ ಸೂಪರ್‌ ಜೈಂಟ್ಸ್‌ ಪರ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next