ಚೆನ್ನೈ: ಕಳೆದ ಕೆಲವು ದಿನಗಳಿಂದ ಚೆನ್ನೈಯಲ್ಲಿ ಸುರಿಯುತ್ತಿರುವ ಮಳೆ ರವಿವಾರವೂ ಮುಂದುವರಿದಿದ್ದು, ನಗರದ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಉಪನಗರ ಪ್ರಾಂತ್ಯಗಳು ಭಾಗಶಃ ಮುಳುಗಡೆಯಾಗಿವೆ.
ಹಲವಾರು ರಸ್ತೆಗಳು, ಅಂಡರ್‌ಪಾಸ್‌ಗಳು ನೀರಿನಲ್ಲಿ ಮುಳುಗಿರುವುದರಿಂದ ಅನೇ ಕ ಕಡೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಳೆ ನಿರಂತರವಾಗಿ ಸುರಿಯುತ್ತಿ ರುವ ಹಿನ್ನೆಲೆಯಲ್ಲಿ ಸೋಮವಾರವೂ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪುದುಚೇರಿ, ಕಾರೈಕಲ್‌ನಲ್ಲಿ ಶಾಲಾ- ಕಾಲೇಜುಗಳಿಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ.
ಚೆನ್ನೈಯ ಸತ್ಯಾ ಗಾರ್ಡನ್, ಕುಲು ವಂಚೇರಿ, ಇಯ್ನಾಪಂಥಂಗಲ್ ಸೇರಿದಂತೆ ಹಲವಾರು ಜನವಸತಿ ಪ್ರದೇಶಗಳಲ್ಲಿ ಮೊಣಕಾಲೆತ್ತರ ನೀರು ನಿಂತಿವೆ. ಜನರು ಅದೇ ನೀರಿನಲ್ಲಿ ತಮ್ಮ ಅಗತ್ಯ ವಸ್ತುಗಳನ್ನು ತರಲು ಓಡಾಡುವಂತಾಗಿದೆ.
ಇದನ್ನೂ ಓದಿ:ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್: ತಜ್ಞರ ಎಚ್ಚರಿಕೆ
ಈ ಪ್ರಾಂತ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ನಿಲುಗಡೆ ಮಾಡಲಾಗಿದ್ದು, ರಾತ್ರಿ ವೇಳೆಯೂ ಆ ನೀರಿನಲ್ಲಿ ತಮ್ಮ ಮೊಬೈಲ್‌ಗಳಲ್ಲಿನ ಟಾರ್ಚ್ ಬೆಳಕಿನಲ್ಲಿ ಜನರು ಸಂಚರಿಸು ವಂತಾಗಿದೆ. ರವಿವಾರ ಸಿಎಂ ಎಂ.ಕೆ. ಸ್ಟಾಲಿನ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಹಾರ ಸಾಮಗ್ರಿಗಳನ್ನೂ ವಿತರಿಸಿದ್ದಾರೆ.