ಚೆನ್ನೈ : ಕೋವಿಡ್ ಸೋಂಕು ವಿಶ್ವದಾದ್ಯಂತ ಜನರ ಜೀವನವನ್ನು ಕತ್ತಲ ಕೂಪಕ್ಕೆ ದೂಡಿದೆ. ಜನ ದುಡಿಮೆ ಇಲ್ಲದೆ, ನೆಮ್ಮದಿಯಿಲ್ಲದೆ ಕೋವಿಡ್ ಗೆ ಶಾಪ ಹಾಕುತ್ತಾ ದಿನದೂಡುತ್ತಿದ್ದಾರೆ.ಇಂಥ ವೇಳೆಯಲ್ಲೂ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಕೋವಿಡ್ ವಾರಿಯರ್ಸ್,ಸರ್ಕಾರ ಪ್ರಯತ್ನ ಮಾಡುತ್ತಲೇ ಇದೆ.
ಚೆನ್ನೈ ರೈಲ್ವೆ ಪೊಲೀಸ್ ಅಧಿಕಾರಿಗಳು ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ತಮಿಳಿನ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳು ಚೆನ್ನೈನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್ ಮತ್ತು ಗ್ಲೌವ್ಸ್ ಧರಿಸಿ ಹಾಡಿಗೆ ನೃತ್ಯ ಮಾಡುತ್ತಾರೆ. ಇದನ್ನು ನೋಡಲು ಜನರು ಕೂಡ ಒಟ್ಟಿಗೆ ಸೇರಿದ್ದಾರೆ.
ಇದನ್ನೂ ಓದಿ :ಮರಣ ಮೃದಂಗ: 24 ಗಂಟೆಯಲ್ಲಿ ದೇಶದಲ್ಲಿ 4025 ಮಂದಿ ಕೋವಿಡ್ ಸೋಂಕಿತರು ಸಾವು!
ತಮಿಳಿನ ‘ಎಂಜಾಯ್ ಎಂಜಾಮಿ’ ಎನ್ನುವ ಹಾಡಿನ ಮೂಲಕ ಪೊಲೀಸರು ಕೋವಿಡ್ ವಿರುದ್ಧ ಹೋರಾಟ ಮಾಡುವ, ನಿಯಮಗಳನ್ನು ಪಾಲಿಸಿ, ಕೋವಿಡ್ ನ್ನು ಸೋಲಿಸುವ ಎಂದು ಜನರಲ್ಲಿ ಜಾಗೃತಿಯ ಬೀಜವನ್ನು ಬಿತ್ತುವ ಪ್ರಯತ್ಮ ಮಾಡಿದ್ದಾರೆ.
ಪೊಲೀಸರ ಈ ನೃತ್ಯದ ವಿಡಿಯೋವನ್ನು ತಮಿಳುನಾಡಿನ ಪ್ರೆಸ್ ಇನ್‍ಫಾರ್ಮೆಷನ್ ಬ್ಯೂರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸದ್ಯ ಇದು ವೈರಲ್ ಆಗಿದೆ. ಎಂಜಾಯ್ ಎಂಜಾಯ್ ಹಾಡನ್ನು ಹಾಡನ್ನು ಧೀರ್ ಅವರು ಹಾಡಿದ್ದು, ಅರಿವು ಎಂಬವರು ಗೀತೆಯನ್ನು ರಚಿಸಿದ್ದಾರೆ. ತಮಿಳು ಮಾತ್ರವಲ್ಲದೆ, ಎಲ್ಲಾ ಭಾಷಿಗರಲ್ಲೂ ಈ ಹಾಡು ಹೊಸ ಸಂಚಲನವನ್ನೇ ಸೃಷ್ಟಿಸಿತು.