Advertisement

Tennis ಚೆನ್ನೈ ಓಪನ್‌: ಸುಮಿತ್‌-ನಾರ್ಡಿ ಫೈನಲ್‌

11:02 PM Feb 10, 2024 | Team Udayavani |

ಚೆನ್ನೈ: ಭಾರತದ ಅಗ್ರ ರ್‍ಯಾಂಕಿಂಗ್‌ ಟೆನಿಸಿಗ ಸುಮನಿತ್‌ ನಾಗಲ್‌ ‘ಚೆನ್ನೈ ಓಪನ್‌’ ಪಂದ್ಯಾವಳಿಯ ಫೈನಲ್‌ ಪ್ರವೇಶಿಸಿದ್ದಾರೆ. ಅವರು ಜೆಕ್‌ ಗಣರಾಜ್ಯದ ದಾಲಿಬರ್‌ ಸರ್ಕಿನ ರನ್ನು 6-3, 6-4 ಅಂತರದಿಂದ ಮಣಿಸಿದರು.

Advertisement

ಫೈನಲ್‌ನಲ್ಲಿ ಭಾರತೀಯನ ಎದುರಾಳಿ ಇಟಲಿಯ ಲುಕಾ ನಾರ್ಡಿ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಚೈನೀಸ್‌ ತೈಪೆಯ ಶ್ರೇಯಾಂಕ ರಹಿತ ಆಟಗಾರ ಚುನ್‌ ಸಿನ್‌ ಸೆಂಗ್‌ ವಿರುದ್ಧ 6-4, 4-6, 7-6 (6) ಅಂತರದ ಗೆಲುವು ಸಾಧಿಸಿದರು.

ಡಬಲ್ಸ್‌ನಲ್ಲಿ “ಆಲ್‌ ಇಂಡಿಯನ್‌’ ಫೈನಲ್‌ಗೆ ವೇದಿಕೆ ಸಜ್ಜಾಗಿದೆ. ಇಲ್ಲಿ ಸಾಕೇತ್‌ ಮೈನೇನಿ-ರಾಮ್‌ಕುಮಾರ್‌ ರಾಮನಾಥನ್‌, ಋತ್ವಿಕ್‌ ಬೊಳ್ಳಿಪಲ್ಲಿ-ನಿಕಿ ಪೂಂಚ್ಚ ಮುಖಾಮುಖಿ ಆಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next