Advertisement
ಬಿಕಾಂ ವಿದ್ಯಾರ್ಥಿಯಾಗಿದ್ದ ಪವಿತ್ರನ್ ಬಿಡುವಿನ ವೇಳೆ ಫುಡ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದ. ಸೆಪ್ಟೆಂಬರ್ 11 ರಂದು ಕೊರಟ್ಟೂರು ಪ್ರದೇಶದಲ್ಲಿ ಫುಡ್ ಡೆಲಿವರಿ ಮಾಡಲು ಹೋಗಿದ್ದಾಗ ಕೆಲ ನಿಮಿಷ ತಡವಾಗಿತ್ತು. ತಡವಾದ ಕಾರಣದಿಂದ ಆಹಾರವನ್ನು ತೆಗೆದುಕೊಳ್ಳುವ ಗ್ರಾಹಕ ಪವಿತ್ರನ್ ಅವರಿಗೆ ನಿಂದಿಸಿ, ಬೈಯ್ದಿದ್ದಾರೆ.
Related Articles
Advertisement
ಘಟನಾ ಸ್ಥಳದಲ್ಲಿ ಪತ್ರವೊಂದು ಸಿಕ್ಕಿದ್ದು, “ಫುಡ್ ಡೆಲಿವರಿ ಸಮಯದಲ್ಲಿ ವ್ಯಕ್ತಿಯಿಂದ ನಿಂದಿಸಲ್ಪಟ್ಟ ನಂತರ ನಾನು ಖಿನ್ನತೆಗೆ ಒಳಗಾಗಿದ್ದೇನೆ. ಇಂತಹ ಮಹಿಳೆಯರು ಇರುವವರೆಗೆ ಹೆಚ್ಚಿನ ಸಾವುಗಳು ಸಂಭವಿಸುತ್ತವೆ” ಎಂದು ಬರೆದುಕೊಂಡಿದ್ದರು.
ಕೊಳತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.