ಚೆನ್ನೈ: ತಮಿಳು ನಟ ಸೂರ್ಯ ಅಭಿನಯದ ಬಹು ನಿರೀಕ್ಷಿತ ‘ಎನ್.ಜಿ.ಕೆ’ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಆದರೆ ಭಾರಿ ಸದ್ದು ಮಾಡಿದ್ದ ವಿಶ್ವದ ಅತೀ ದೊಡ್ಡ ‘ಎನ್.ಜಿ.ಕೆ’ ಕಟೌಟ್ ಅನ್ನು ಚೆನ್ನೈ:ಪಾಲಿಕೆ ಅಧಿಕಾರಿಗಳು ಕಿತ್ತು ಹಾಕಿದ್ದಾರೆ.
ನಟ ಸೂರ್ಯ ಅವರ ಅಭಿಮಾನಿಗಳು ಚಿತ್ರ ಬಿಡುಗಡೆಯ ಸಂಭ್ರಮದಲ್ಲಿ 215 ಅಡಿ ಎತ್ತರದ ಕಟೌಟ್ ಅನ್ನು ನಿಲ್ಲಿಸಿದ್ದರು. ಇದು ವಿಶ್ವದ ಅತೀ ಎತ್ತರದ ಕಟೌಟ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು.
ಆದರೆ ಕಟೌಟ್ ನಿಲ್ಲಿಸಲು ಯಾವುದೇ ಪರವಾನಗಿ ಪಡೆದಿಲ್ಲ ಮತ್ತು ಅಪಾಯಕಾರಿ ಎಂಬ ಕಾರಣಕ್ಕೆ ಚೆನ್ನೈ ಪಾಲಿಕೆ ಅಧಿಕಾರಿಗಳು ಕಟೌಟ್ ಅನ್ನು ಕೆಡವಿದ್ದಾರೆ. ಇದರಿಂದ ಬೇಸರಗೊಂಡ ಸೂರ್ಯ ಅಭಿಮಾನಿಗಳು ಪ್ರತಿಭಟನೆ ಕೂಡಾ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಂದ ಹಾಗೆ ಈ ಬೃಹತ್ ಕಟೌಟ್ ಗೆ ಆರು ಲಕ್ಷ ಖರ್ಚು ಮಾಡಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಈ ಕಟೌಟ್ ನಿರ್ಮಾಣ ಕಾರ್ಯ ನಡೆದಿತ್ತು.