ಆತ್ಮಹತ್ಯೆಯ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದ್ದು, 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 53 ನಗರಗಳಲ್ಲಿ
19,665 ಆತ್ಮಹತ್ಯೆ ನಡೆದಿವೆ. ಇವುಗಳ ಪೈಕಿ ದೆಹಲಿಯಲ್ಲಿ 1,855 ಆತ್ಮಹತ್ಯೆಗಳು ನಡೆದಿವೆ. 2014ರಲ್ಲಿ ಒಟ್ಟಾರೆ 19,597 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು.
Advertisement
ಆದರೆ, 2014ಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಮಾಣ ಶೇ. 2.7ರಷ್ಟು ಇಳಿಕೆಯಾಗಿದೆ. ಚೆನ್ನೈನಲ್ಲಿಅತ್ಯಧಿಕ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, 2015ರಲ್ಲಿ 2,274 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ವೇಳೆ
ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 1,553 ಮಂದಿ, ಮುಂಬೈನಲ್ಲಿ 1,122 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉದ್ಯೋಗವನ್ನು ಅರಸಿ ಬೆಂಗಳೂರು ಮತ್ತು ಮುಂಬೈಗೆ ಸಾಕಷ್ಟು ಮಂದಿ ವಲಸೆ ಬರುತ್ತಾರೆ. ಆದರೆ, ನಿರುದ್ಯೋಗದ ಕಾರಣದಿಂದಾಗಿ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, 87 ಮಂದಿ ನಿರುದ್ಯೋಗದ ಸಮಸ್ಯೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ 86 ಮಂದಿ ನಿರುದ್ಯೋಗ ದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಕೌಟುಂಬಿಕ ಕಾರಣದಿಂದಾಗಿ ಚೆನ್ನೈನಲ್ಲಿ 870 ಮಂದಿ ಆತ್ಮಹತ್ಯೆಗೆ ಶರಣಾಗಿದ್ದು, ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕೌಟುಂಬಿಕ ಕಾರಣಕ್ಕೆ 815 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಚೆನ್ನೈನಲ್ಲಿ 448 ಜನರು ಮತ್ತು ಬೆಂಗಳೂರಿನಲ್ಲಿ 229 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವಾಳಿತನದಿಂದ ಚೆನ್ನೈನಲ್ಲಿ 154 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬೆಂಗಳೂರಿನಲ್ಲಿ 21 ಮಂದಿ ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಗರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪ್ರೇಮ ವೈಫಲ್ಯಕ್ಕೆ ಬೆಂಗಳೂರಿನಲ್ಲಿ 73 ಮಂದಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ಚೆನ್ನೈನಲ್ಲಿ 61, ದೆಹಲಿಯಲ್ಲಿ 39 ಮತ್ತು ಮುಂಬೈನಲ್ಲಿ 30 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.