ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಚೆನ್ನೈ ಮೂಲದ “ಚೆನ್ನೈಸ್ ಅಮಿರ್ತಾ’ ಹೆಸರಿನಡಿ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ (ಐಐಹೆಚ್‌ಎಂಸಿ) ಬೆಂಗಳೂರು ಕ್ಯಾಂಪಸ್‌ಗೆ ಚಾಲನೆ ದೊರೆಯಿತು.
ಸೋಮವಾರ ಕ್ಯಾಂಪಸ್ ಉದ್ಘಾಟಿಸಿದ ಮಲೇಷಿಯ ಓಪನ್ ಯೂನಿವರ್ಸಿಟಿ ಉಪಕುಲಾಧಿಪತಿ ವೈಬಿಎಚ್‌ಜಿ ಪೊ›. ಡ್ಯಾಟೋ ಡಾ. ಮನ್ಸೊರ್ ಬಿನ್ ಫಡಿjಲ್ ಅವರು ಮಾತನಾಡಿ, “ಚೆನ್ನೈಸ್ ಅಮಿರ್ತಾ’ ಇನ್‌ಸ್ಟಿಟ್ಯೂಟ್ ಅದ್ಭುತ ಸಾಧನೆ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಇಂಥ ಅಭೂತಪೂರ್ವ ಸಾಧನೆ ಮಾಡಲು ಮುಂದಾಗಿರುವ ಸಂಸ್ಥೆಯ ಅಧ್ಯಕ್ಷ ಭೂಮಿನಾಥನ್ ಅವರ ಹಾದಿ ಸುಗಮವಾಗಲಿ ಎಂದು ಆಶಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸ್ಪರ್ಧೆ ಇದ್ದು, ಅದರಿಂದಾಗಿ ಉತ್ತಮ ಗುಣಮಟ್ಟದ ಉಪನ್ಯಾಸಕರು, ಗುಣಮಟ್ಟದ ಶಿಕ್ಷಣ ಅವಶ್ಯವಾಗಿದೆ. ಭಾರತದಾದ್ಯಂತ “ಚೆನ್ನೈಸ್ ಅಮಿರ್ತಾ’ ಪ್ರಸಿದ್ಧಿಯಾಗಿದ್ದು ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಷ್ಟೇ ಅಲ್ಲದೆ, ಮಾಲ್ಡೀವ್ಸ್, ಮಾರಿಷಸ್, ಘಾನಾ, ಸೊಮಾಲಿಯಾ ಸೇರಿದಂತೆ ಇತರೆ ದೇಶಗಳಲ್ಲೂ ಇದರ ಶಾಖೆಗಳಿರುವುದ ಸಂತಸ ತಂದಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಭೂಮಿನಾಥನ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ನಮ್ಮ ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳಿದ್ದಾರೆ. ದೇಶಾದ್ಯಂತ ನಮ್ಮ ಸಂಸ್ಥೆಯಲ್ಲಿ 12ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಕಲಿತ ನಾಲ್ಕು ಮಂದಿ ಸ್ವರ್ಣ ಪದಕ ಪಡೆದು ಚೀನಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಶೇ.100ಕ್ಕೆ 100ರಷ್ಟು ಪ್ಲೇಸ್‌ಮೆಂಟ್ ಸೌಲಭ್ಯವಿರುವ ಚೆನ್ನೆಸ್ ಅಮಿರ್ತಾ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಕರ್ನಾಟಕದ ಪ್ರತಿಷ್ಠಿತ ನಗರಗಳಲ್ಲಿ ಹಾಗೂ ಹೈದರಾಬಾದ್‌ನಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು. ಸಂಸ್ಥೆಯ ಎಂ.ಡಿ. ಉಮಾ ಮಹೇಶ್ವರಿ, ಮಾಜಿ ಕಾರ್ಪೊರೇಟರ್ ಗಂಗಾಧರಯ್ಯ, ಸಮಾಜ ಸೇವಕ ಶಶಿನಾಯಕ್, ಮಲೇಷಿಯಾದ ಟ್ರೆçನಿಂಗ್ ಮೈಂಡ್ಸ್‌ನ ಜೈನ್‌ನ್ಯಾಕ್ ಸಿಂಗ್ ಉಪಸ್ಥಿತರಿದ್ದರು.