Advertisement

ಶೋಷಿತರ‌ಲ್ಲಿ ಮೂಢನಂಬಿಕೆ ಜೀವಂತ

01:25 PM May 01, 2019 | Naveen |

ಚನ್ನಗಿರಿ: ಚಂದ್ರಗುತ್ತಿ ಬೆತ್ತಲೆ ಸೇವೆ ನಿಂತಿದೆಯಾದರೂ ದಲಿತ ಹಾಗೂ ಶೋಷಿತ ಸಮುದಾಯಗಳಲ್ಲಿ ಮೂಢನಂಬಿಕೆ, ಕಂದಚಾರ ಜೀವಂತವಾಗಿದೆ ಎಂದು ತಾಲೂಕು ದಸಂಸ ಸಂಘಟನೆ ಹಿರಿಯ ಮುಖಂಡ ಸಿ. ಸಿದ್ದಪ್ಪ ಹೇಳಿದರು.

Advertisement

ರಾಮ ಮನೋಹರ ಲೋಹಿಯ ಭವನದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ| ಬಿ.ಆರ್‌. ಅಂಬೇಡ್ಕರ್‌ ಜನ್ಮದಿನ ಹಾಗೂ ಡಾ| ಬಾಬು ಜಗಜೀವನ್‌ ರಾಮ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಂದ್ರಗುತ್ತಿ ಬೆತ್ತಲೆ ಸೇವೆ ಹೆಸರಿನಲ್ಲಿ ದಲಿತ ಸಮುದಾಯಗಳ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಅವರನ್ನು ಶೋಷಣೆಗೆ ಬಲಿಯಾಗಿಸಿ ಮೂಢನಂಬಿಕೆ ಬಿತ್ತಲಾಗುತ್ತಿದ್ದ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಟ ಮಾಡಿ ಜಾಗೃತಿ ಮೂಡಿಸಲಾಗಿದೆ ಎಂದರು.

ದಸಂಸ ಎಲ್ಲ ವರ್ಗಗಳ ಶೋಷಿತರ ಪರವಾದ ಸಂಘಟನೆಯಾಗಿದೆ. ಇಂತಹ ಸಂಘಟನೆಯನ್ನು ಯಾರೊಬ್ಬರು ಜಾತಿಗೆ ಸೀಮಿತಗೊಳಿಸಬಾರದು. ಪ್ರಸ್ತುತ ಎಲ್ಲ ಸಮುದಾಯಗಳಲ್ಲಿ ಶೋಷಣೆಗೆ ಒಳಪಟ್ಟವರು ನೋವನ್ನು ಅನುಭವಿಸುತ್ತಿದ್ದಾರೆ ಅವರಿಗೆ ನ್ಯಾಯವನ್ನು ಕೊಡಿಸುವ ಸಿದ್ಧಾಂತವನ್ನು ಮಾತ್ರ ನಾವುಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಕದಸಂಸ ರಾಜ್ಯಸಂಚಾಲಕ ಹೆಣ್ಣೂರು ಶ್ರೀನಿವಾಸ್‌ ಮಾತನಾಡಿ, ದಾವಣಗೆರೆ ಇತಿಹಾಸದಲ್ಲಿ ಕುರುಬರಿಗೆ ರಾಜಕೀಯ ಶಕ್ತಿ ದೊರೆತಿದೆ ಎಂದು ಪ್ರೊ| ಬಿ. ಕೃಷ್ಣಪ್ಪ ಹಾಗೂ ದಲಿತ ಸಮುದಾಯದಿಂದ. ಅಂಬೇಡ್ಕರ್‌ ರಚಿಸಿದ ಸಂವಿಧಾನದ ಫಲವಾಗಿಯೇ ಶ್ರೂದರು, ಲಿಂಗಾಯತರು, ಬಣಜಿಗರು ಸೇರಿದಂತೆ ವಿವಿಧ ಸಮುದಾಯಗಳಿಗೆ ಮತದಾನದ ಹಕ್ಕು ದೊರೆತಿದೆ. ಇದನ್ನು ಯಾರು ಮರೆಯಬಾರದು ಎಂದರು.

Advertisement

ಇಡೀ ದೇಶದಲ್ಲಿ ದಲಿತ ಸಮುದಾಯದವರು ಶೇ. 57ರಷ್ಟು ಇದ್ದಾರೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಶೇ. 70ರಷ್ಟು ಭಾಗ ಬ್ರಾಹ್ಮಣ ಸಮುದಾಯದವರು ಸಚಿವರಾಗಿದ್ದಾರೆ. ದಲಿತ ವರ್ಗವನ್ನು ರಾಜಕೀಯವಾಗಿ ಶೋಷಣೆ ಮಾಡಲಾಗುತ್ತಿದೆ. ಇಂತಹ ವಿಷಯಗಳ ಬಗ್ಗೆ ಹೋರಾಟ, ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಮನುವಾದಿಗಳು ಎಂದರೆ ಮೇಲ್ಜಾತಿಯವರಲ್ಲ. ನಮ್ಮಗಳ ನಡುವೆಯೇ ವಿಷಬೀಜ ಬಿತ್ತಿ ಒಡೆದಾಡುವ ನೀತಿಯನ್ನು ಅನುಸರಿಸುತ್ತಿರುವವರು ಮನುವಾದಿಗಳು ಎಂದು ನಾವುಗಳು ಅರ್ಥೈಸಿಕೊಳ್ಳಬೇಕು. ಇನ್ನೂ ಮುಂದೆ ದಲಿತ ಅನ್ನುವ ಪದವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮೊದಲು ಶಿಕ್ಷಣವಂತಾರಗಬೇಕು. ಎಲ್ಲಿ ಶಿಕ್ಷಣ ಇರುತ್ತದೆಯೋ ಅಲ್ಲಿ ದಲಿತ ಅನೋ ಪದ ಇರುವುದಿಲ್ಲ. ಆದ್ದರಿಂದ ದಲಿತರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕದಸಂಸ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ ಮಾತನಾಡಿ, ರೋಲ್ಕಾಲ್ ಚಳವಳಿಗಾರರು ಮನುವಾದಿಗಳ ರಕ್ಷಣೆಗೆ ನಿಂತಿರುವುದು ದುರಂತದ ಸಂಗತಿ. ಸಂಘಟನೆ ಹೆಸರಿನಲ್ಲಿ ಜೀವನ ನಿರ್ವಹಣೆ ಮಾಡುವವರು ಸಂಖ್ಯೆ ಹೆಚ್ಚಾಗಿದೆ, ಅಂತಹವರ ಜನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಸಂವಿಧಾನ ಉಳಿಸಿ ಮನುವಾದಿಗಳನ್ನು ತೊಲಗಿಸಿ ಹೆಸರಿನಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಹಿರಿಯೂರಿನ ಕೋಡಿಹಳ್ಳಿ ಶಾಖಾಮಠದ ಶ್ರೀ ಷಡಾಕ್ಷರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೋಹನ್‌ ಕುಮಾರ್‌ ಉಪನ್ಯಾಸ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಬಿ. ದುಗ್ಗಪ್ಪ, ಮರೀಶ್‌ ನಾಗಣ್ಣನವರ್‌, ಹಿರಿಯ ಮುಖಂಡ ಎಂಕೆ. ನಾಗಪ್ಪ, ದಸಂಸ ತಾಲೂಕು ಸಂಚಾಲಕ ಕೃಷ್ಣಪ್ಪ ನವಿಲೆಹಾಳ್‌, ಪುರಸಭೆ ಸದಸ್ಯೆ ಲಕ್ಷಿ ್ಮೕದೇವಮ್ಮ, ನರಸಿಂಹಮೂರ್ತಿ, ಎಚ್.ಎನ್‌. ಮೂರ್ತಿ, ನೀತಿಗೆರೆ ಮಂಜಪ್ಪ, ಪಾಂಡೋಮಟ್ಟಿ ಆರ್‌. ಪ್ರಭಾಕರ್‌, ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next