Advertisement

ಚಿಣ್ಣರ ಜ್ಞಾನವೃದ್ಧಿಗೆ ಆಟಿಕೆ ಅಗತ್ಯ

11:03 AM Oct 08, 2017 | |

ಕೆ.ಆರ್‌.ಪುರ: ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಮನರಂಜನೆಯೊಂದಿಗೆ ಶಿಕ್ಷಣ ನೀಡಿ ಪ್ರಜಾnವಂತ ಪ್ರಜೆಗಳನ್ನಾಗಿ ಸೃಷ್ಟಿಸಬೇಕಿದೆ ಎಂದು ಟೇಬಲ್ಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅದೀಬ್‌ ಅಹ್ಮದ್‌ ತಿಳಿಸಿದರು.

Advertisement

ಫೀನಿಕ್ಸ್‌ ಮಾರುಕಟ್ಟೆಯಲ್ಲಿ ಟೇಬಲ್ಸ್‌ ಇಂಡಿಯಾ ಪ್ರಾಂಚೈಸ್‌ ಸಹಯೋಗದಲ್ಲಿ ಪ್ರಾರಂ¸‌ಗೊಂಡ ಟಾಯ್ಸ ಆರ್‌ ಅಸ್‌ ಆಟಿಕೆಯ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಸೂಕ್ಷ್ಮ ಮನಸ್ಸುಳ್ಳ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಪೋಷಕರು ಸಾಕಷ್ಟು ಒತ್ತಡ ಹೇರುವುದು ಒಳಿತಲ್ಲ, ಇದು ಅವರ ಸೂಕ್ಷ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಇದರ ಸುಧಾರಣೆಗೆ ಆಟಿಕೆ ಮಳಿಗೆ ಪ್ರಾರಂಭವಾಗಿದ್ದು ಮಕ್ಕಳ ಮನಸ್ಸಿಗೆ ಮನರಂಜನೆ ನೀಡುವ ಶೈಕ್ಷಣಿಕ ಜಾnನ ವೃದ್ಧಿಸುವ ಆಟಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದರು. 3ರಿಂದ 11ವರ್ಷದ ಪ್ರಾಯದ ಮಕ್ಕಳನ್ನು ರಂಜಿಸುವ ಬೊಂಬೆಗಳು, ಪುಸ್ತಕಗಳು, ರೋಲ್‌ ಪ್ಲೇ ಕಿಟ್‌ಗಳು, ರಿಮೋಟ್‌ ಕಂಟ್ರೋಲ್‌ ಕಾರ್‌ಗಳು ಸೇರಿ ನೂರಾರು ಬಗೆಯ ಆಟಿಕೆಗಳಿವೆ.

ಮಕ್ಕಳ ದೇಹವನ್ನು ದೃಢಗೊಳಿಸುವ ಬಾಸ್ಕೆಟ್‌ ಬಾಲ್‌ ಪರಿಕರಗಳು, ಬಾಕ್ಸಿಂಗ್‌ ಪರಿಕರಗಳು, ಗಿಯರ್‌, ಯೂಥ್‌ ಪುಟ್ಬಾಲ್‌, ನವಜಾತ ಶಿಶುವಿಗೆ ಅಗತ್ಯವಿರುವ ಪೌಷ್ಟಿಕಾಂಶ ಆಹಾರವೂ ಇಲ್ಲಿ ಲಭ್ಯವಿದೆ ಎಂದರು. ಈ ವೇಳೆ ಟೇಬಲ್ಸ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧೀಕಾರಿ ಶಫೀನಾ ಯೂಸಪ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next