Advertisement
2016-17ನೇ ಸಾಲಿನಲ್ಲಿ ಉದಯವಾಣಿ ಇಲ್ಲಿನ ಕಾರ್ಖಾನೆಗಳ ಕೆಮಿಕಲ್ ತ್ಯಾಜ್ಯದ ಸಮಸ್ಯೆಗಳ ಕುರಿತು ಸಮಗ್ರ ಸರಣಿ ವರದಿಗಳು ಪ್ರಕಟಿಸಿತ್ತು. ನಂತರದ 22-11-2017ರಂದು ಅಂದಿನ ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ನೇತೃತ್ವದಲ್ಲಿ ಒಟ್ಟಾರೆ 12 ತಂಡಗಳು ರಚಿಸಿಕೊಂಡು ಪಟ್ಟಣ ಹೊರವಲಯದ ಕೈಗಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವ ಕೆಲ ಕಾರ್ಖಾನೆಗಳ ಬಂದ್ ಮಾಡುವ ನಿಟ್ಟಿನಲ್ಲಿ ಪರಿಸರ ಇಲಾಖೆಗೆ ಸೂಚನೆ ಕೂಡ ನೀಡಿದರು. ನಂತರ ದಿನಗಳಲ್ಲಿ ಗಡವಂತಿ ಹಾಗೂ ಮಾಣಿಕನಗರದ ಹಳ್ಳಕ್ಕೆ ಕೈಗಾರಿಕೆಗಳ ಕೆಮಿಕಲ್ ಮಿಶ್ರಿತ ತ್ಯಾಜ್ಯ ಹೆಚ್ಚಾಗಿ ಬಂದಿಲ್ಲ. ಆದರೆ, ಕಳೆದ ಕೆಲ ತಿಂಗಳಿಂದ ಮತ್ತೆ ಅದೇ ಕತೆ ಆರಂಭಗೊಂಡಿದ್ದು, ಗಡವಂತಿ ಹಾಗೂ ಮಾಣಿಕನಗರದ ಗ್ರಾಮಸ್ಥರು ಮತ್ತೆ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.
Related Articles
Advertisement
ಮಾಣಿಕಪ್ರಭುಗಳ ಪುಣ್ಯಭೂಮಿ ಇಂದು ಕೆಮಿಕಲ್ ವಿಷಮಯವಾಗಿದೆ. ಹಳ್ಳದಲ್ಲಿ ನೀರಿನ ಬದಲಿಗೆ ಕೆಮಿಕಲ್ ಕಾರ್ಖಾನೆಗಳ ತ್ಯಾಜ್ಯ ತುಂಬಿಕೊಂಡು ಗಬ್ಬು ವಾಸನೆ ಹರಡುತ್ತಿದೆ. ಜಲಚರಗಳು ಸಂಪೂರ್ಣ ನಾಶವಾಗಿವೆ. ಕೈಗಾರಿಕೆಗಳ ಕಲುಷಿತ ನೀರು ಅಂತರ್ಜಲವನ್ನು ಸಹ ಕಲುಷಿತಗೊಳಿಸಿದೆ. ಕೊಳವೆ ಬಾವಿ ನೀರನ್ನು ಕುಡಿಯುವುದಿರಲಿ ಸ್ನಾನ ಮಾಡಿದರು ಚರ್ಮ ರೋಗಗಳು ಜನರನ್ನು ಬಾದಿಸುತ್ತಿವೆ. ಜನರ ಜೀವಕ್ಕೆ ಆಪತ್ತು ಉಂಟುಮಾಡುವ ಕಾರ್ಖಾನೆಗಳು ಕೂಡಲೇ ಬಂದ್ ಮಾಡಿಸಬೇಕು.- ಆನಂದರಾಜ ಪ್ರಭುಗಳು, ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿಗಳು
ಹಳ್ಳಿದಲ್ಲಿ ಕೆಮಿಕಲ್ ಮಿಶ್ರಿತ ನೀರು ತುಂಬಿಕೊಂಡಿರುವ ಕುರಿತು ಗ್ರಾಮಸ್ಥರು ಕಚೇರಿಗೆ ಬಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿನೀಡಿ ಸಮಸ್ಯೆ ಆಲಿಸಿದ್ದೇನೆ. ಭಾವಿ ಹಾಗೂ ತೆರೆದ ಭಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಜನರು ದೂರಿದ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದು, ಗ್ರಾಮದಲ್ಲಿನ ನೀರು ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ. ಅಲ್ಲದೆ, ಸಂಬಂಧಿಸಿದವರಿಂದ ಸೂಕ್ತ ವಿವರಣೆ ಪಡೆದುಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. –ಜಯಶ್ರೀ ತಹಶೀಲ್ದಾರರು
-ದುರ್ಯೋಧನ ಹೂಗಾರ