Advertisement

ಡ್ರೋಣ್‌ ಸ್ಪ್ರೆಯರ್‌ನಿಂದ ರಾಸಾಯನಿಕ ಸಿಂಪಡಣೆ

06:07 PM Mar 23, 2021 | Team Udayavani |

ಕಂಪ್ಲಿ: ತಾಲೂಕಿನ ಕೊಟ್ಟಾಲ್‌ ಗ್ರಾಮ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಡ್ರೋನ್‌ ಸ್ಪ್ರೆಯರ್‌ ಮೂಲಕ ಭತ್ತದ ಗದ್ದೆಗಳಿಗೆ ರಾಸಾಯನಿಕ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.

Advertisement

ಗ್ರಾಮದ ಪ್ರಗತಿಪರ ರೈತ ಮಾದಿನೇನಿ ನಾಗರಾಜ ಅವರ ಭತ್ತದ ಗದ್ದೆಯಲ್ಲಿ ಡ್ರೋನ್‌ ಸ್ಪ್ರೆàಯರ್‌ ಮೂಲಕ ಬಯೋ ಹರ್ಬಲ್‌ ಎಕ್ಸ್‌ಟ್ರಾಕ್ಟ್ ಔಷಧ ಸಿಂಪಡಣೆ ಮಾಡಿ ರೈತರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅ ಧಿಕಾರಿ ಶ್ರೀಧರ್‌ ಡ್ರೋನ್‌ ಸ್ಪ್ರೆàಯರ್‌ ಬಳಕೆಯಿಂದರೈತರಿಗೆ ಸಮಯದ ಉಳಿತಾಯ, ಕೃಷಿ ಕೂಲಿ ಕಾರ್ಮಿಕರ ಅಭಾವ ನೀಗುವುದರ ಜೊತೆಗೆ ಸುರಕ್ಷತೆಯೂ ಇದೆ. ಬೆಳೆಯ ಎಲ್ಲ ಭಾಗಗಳಿಗೂ ಸಮಾನವಾಗಿ ಔಷ ಧಿ ಸಿಂಪಡಣೆ ಆಗುತ್ತದೆ ಎಂದರು.

ಡ್ರೋನ್‌ಸ್ಪ್ರೆàಯರ್‌ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದ್ದು, 98800 37655, 79882 15637 ಅನ್ನು ಸಂಪರ್ಕಿಸುವಂತೆ ಕಲ್ಗುಡಿ ಟ್ರೇಡರ್‌ Õನ ವಿಶ್ವನಾಥ್‌ ಮನವಿ ಮಾಡಿದರು. ರೈತರಾದ ಎಂ.ಭೀಮಲಿಂಗ, ಕೆ.ನೆಹರು, ಯಣ್ಣಿ ವೆಂಕಟೇಶ್‌, ಕೆ.ಸುರೇಶ್‌, ಪಿ.ರಾಮಕೃಷ್ಣ, ಎನ್‌.ರಾಜ, ಎಂ.ಹರೀಶ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next