ಮದ್ದೂರು: ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ರಾಸಾಯನಿಕ ಮಿಶ್ರಿತ ಹಾಲು ಸರಬರಾಜುಮಾಡಿದ ಆರೋಪದ ಮೇರೆಗೆ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕಡಾ.ಮಂಜೇಶ್ ನೀಡಿದ ದೂರಿನ ಮೇರೆಗೆ ಕೆ.ಹೊನ್ನಲಗೆರೆ ಎಂಪಿಸಿಎಸ್ ಕಾರ್ಯದರ್ಶಿ ಅಂಕರಾಜು ಅವರನ್ನು ಬಂಧಿಸಲಾಗಿದೆ.
ಡಾ.ಮಂಜೇಶ್ ಅವರ ದೂರಿನ ಮೇರೆಗೆಕಾರ್ಯಪ್ರವೃತ್ತರಾದ ಮದ್ದೂರು ಸಿಪಿಐಹರೀಶ್ ನೇತೃತ್ವದ ಅಧಿಕಾರಿಗಳ ತಂಡ ಜ.22ರ ಶನಿವಾರ ಅಂಕರಾಜು ಅವರನ್ನುವಶಕ್ಕೆ ಪಡೆದು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆ ಗಾಗಿಪೊಲೀಸ್ ಇಲಾಖೆ ವಶಕ್ಕೆ ಪಡೆದಿದ್ದಾರೆ.
ಅಂಕರಾಜು ಕಳೆದ ಹಲವು ವರ್ಷಗಳಿಂದಕೆ.ಹೊನ್ನಲಗೆರೆ ಎಂಪಿಸಿಎಸ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವ ಜತೆಗೆ ಪ್ರಸ್ತುತಕೇಳಿ ಬಂದಿರುವ ಸಕ್ಕರೆ, ಉಪ್ಪು ಹಾಗೂ ರಾಸಾಯನಿಕ ಮಿಶ್ರಿತ ಹಾಲು ಸರಬರಾಜು ಮಾಡಿದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಆಡಳಿತ ಮಂಡಳಿ ಸಭೆ: ಮನ್‌ಮುಲ್ ಆಡಳಿತ ಮಂಡಳಿ ತುರ್ತು ಸಭೆ ವೇಳೆ ಕಳೆದ ವಾರದಿಂದೀಚೆಗೆ ಕೆ.ಹೊನ್ನಲಗೆರೆ ಎಂಪಿಸಿಎಸ್ ನಿಂದ ಹಾಲು ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮತ್ತು ಕಾರ್ಯದರ್ಶಿಅಂಕರಾಜು ಅವರ ಬಂಧನದ ಹಿನ್ನೆಲೆಯಲ್ಲಿ ಭಾನುವಾರ ಆಡಳಿತ ಮಂಡಳಿ ಸಭೆ ಆಯೋಜಿಸಲಾಗಿತ್ತು.
ಅಭಿಪ್ರಾಯ ತಿರಸ್ಕಾರ: ಸಭೆ ವೇಳೆ ಸಂಘದಲ್ಲಿ ಉಂಟಾಗಿರುವ ವ್ಯತ್ಯಯಗಳು ಮತ್ತುಹಾಲು ಸರಬರಾಜು ಮತ್ತು ಎಂಪಿಸಿಎಸ್‌ಸದಸ್ಯರಿಗೆ ಎದುರಾಗಿರುವ ಸಮಸ್ಯೆ ಕುರಿತಾಗಿಚರ್ಚಿಸುವ ವೇಳೆ ಇವುಗಳ ನಿವಾರಣೆಗಾಗಿ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಸಿಬ್ಬಂದಿಯನ್ನು ಸಾಮೂಹಿಕವಾಗಿ ವಜಾಗೊಳಿಸಿ ನೂತನ ನೌಕರರ ನೇಮಕಕ್ಕೆ ಕೆಲನಿರ್ದೇಶಕರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕೆಲವರು ತಿರಸ್ಕರಿಸಿದ್ದಾರೆ.ಈ ವೇಳೆ ಏರ್ಪಟ್ಟ ಮಾತಿನ ಚಕಮಕಿಹಿನ್ನೆಲೆಯಲ್ಲಿ ಭಾನುವಾರ ನಡೆದ ಆಡಳಿತಮಂಡಳಿ ಸದಸ್ಯರ ಸಭೆಯಲ್ಲಿ ಯಾವುದೇನಿರ್ಣಯ ಕೈಗೊಳ್ಳಲು ಸಾಧ್ಯವಾಗದೆ ಸಭೆಯನ್ನು ಮುಕ್ತಾಯಗೊಳಿಸಲಾಗಿದೆ.
ಖಾಸಗಿ ಸಂಸ್ಥೆಗೆ ಹಾಲು : ಸ್ಥಳೀಯ ಹಾಲು ಉತ್ಪಾದಕರಹಿತದೃಷ್ಟಿಯಿಂದ ಸದ್ಯಕ್ಕೆ ಸಂಗ್ರಹವಾಗುತ್ತಿರುವ ಹಾಲನ್ನು ಖಾಸಗಿ ಒಡೆತನದಸಂಸ್ಥೆಯೊಂದಕ್ಕೆ ರವಾನಿಸಲಾಗುತ್ತಿದ್ದು,ರೈತರ ಹಿತ ಕಾಯಲು ಮನ್‌ಮುಲ್‌ಆಡಳಿತ ಮಂಡಳಿ ಹಾಲು ಖರೀದಿಪ್ರಕ್ರಿಯೆಯನ್ನು ಪುನರ್ ಆರಂಭಿಸುವಂತೆ ಮತ್ತು ಹಾಲಿ ಎದುರಾಗಿರುವ ಸಮಸ್ಯೆಗೆ ಕಾರಣ ರಾದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುವಂತೆ ರೈತರು ಆಗ್ರಹಿಸಿದ್ದಾರೆ.