Advertisement
ಗಣೇಶನ ಭಕ್ತರು ಮತ್ತು ಯುವಜನತೆ ಪಿಒಪಿ ಗಣೇಶ ವಿಗ್ರಹದೆಡೆಗೆ ಆಕರ್ಷಿತರಾಗುತ್ತಿದ್ದ ವೇಳೆಯಲ್ಲೂ ಕೂಡ ಕಮಲಿನಿ ಸಂಸ್ಥೆ ಪರಿಸರ ಸ್ನೇಹಿ ಗಣೇಶ ವಿಗ್ರಹಕ್ಕೆ ಆದ್ಯತೆ ನೀಡಿತ್ತು. ಪಿಒಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿ ತಯಾರಿಸಿದ ಗಣೇಶ ವಿಗ್ರಹಗಳನ್ನು ನೀರಿಗೆ ಹಾಕಿ ಜಲಮೂಲ ನಾಶ ಮಾಡಬಾರದು ಎಂಬ ಉದ್ದೇಶದಿಂದಲೇ ಕಮಲಿನಿ ಸಂಸ್ಥೆ ಪರಿಸರ ಸ್ನೇಹಿ ಗಣೇಶ ವಿಗ್ರಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ.
ಪ್ರಸ್ತುತ ಕಮಲಿನಿ ಸಂಸ್ಥೆಯಲ್ಲಿ 1ರಿಂದ 6 ಅಡಿಗಳ ವರೆಗಿನ ಗಣೇಶನ ವಿಗ್ರಹಗಳು ಲಭ್ಯವಿದೆ. 1 ಅಡಿ ಗಣೇಶ ವಿಗ್ರಹಕ್ಕೆ 400 ರೂ.ಗಳು. 1.50 ಅಡಿ ವಿಗ್ರಹಕ್ಕೆ 500 ರೂ.ಗಳು, 2 ಅಡಿಗೆ 600 ರೂ.ಗಳಂತೆ ಬೆಲೆ ನಿಗದಿಪಡಿಸಲಾಗಿದೆ. ಗೌರಿ ವಿಗ್ರಹ (ದೊಡ್ಡದು)ಕ್ಕೆ 250 ರೂ. ಮತ್ತು 2.50 ಇಂಚಿನ ವಿಗ್ರಹಕ್ಕೆ 180 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಗಣೇಶ ಮತ್ತು ಗೌರಿ ವಿಗ್ರಹಗಳಿಗೆ ಯಾವುದೇ ರಾಸಾಯನಿಕ ಬಣ್ಣ ಬಳಸಿಲ್ಲ. ಜೇಡಿ ಮಣ್ಣನ್ನು ಬಳಕೆ ಮಾಡಿ ವಿಗ್ರಹ ಮಾಡಲಾಗಿದೆ. ಪ್ರತಿ ವರ್ಷವೂ ಪರಿಸರ ಸ್ನೇಹಿ ಗಣೇಶ ಮತ್ತು ಗೌರಿ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದೇವೆ. ನಮ್ಮ ಗ್ರಾಹಕರು ಕೂಡ ಪರಿಸರ ಸ್ನೇಹಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವವರಾಗಿದ್ದಾರೆ. ಹಬ್ಬಕ್ಕೂ ಎರಡು ವಾರ ಮುಂಚಿನಿಂದಲೇ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತದೆ. ಈ ಬಾರಿ ಆ.16ರಿಂದ ಬುಕ್ಕಿಂಗ್ ಪ್ರಾರಂಭವಾಗಿದ್ದು, ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಮೂರ್ತಿಗಳು ಬುಕ್ ಆಗಿವೆ. ಹಬ್ಬಕ್ಕೆ ಇನ್ನೂ 5 ದಿನ ಬಾಕಿ ಇರುವುದರಿಂದ ಈ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.
Related Articles
Advertisement
ಭೇಟಿ ಮಾಡಿಪರಿಸರ ಸ್ನೇಹಿ ಗೌರಿ-ಗಣೇಶ ವಿಗ್ರಹಗಳು ಬೇಕೆನ್ನಿಸಿದರೆ ಭಕ್ತರು, ಕಮಲಿನಿ, ಶ್ರೀಭೂಮ, ನಂ.37, 17ನೇ ತಿರುವು, ಮಲ್ಲೇಶ್ವರಂ, ಬೆಂಗಳೂರು-57. ದೂರವಾಣಿ: 080-23567470 ಸಂಪರ್ಕಿಸಬಹುದು. ಆ.24ರಂದು ಗೌರಿ ಹಬ್ಬ ಇದ್ದು ಅಂದು ಮಧ್ಯಾಹ್ನದ ವರೆಗೆ ಮಾತ್ರ ಅಂಗಡಿ ಕಾರ್ಯನಿರ್ವಹಿಸಲಿದೆ. * ಸಂಪತ್ ತರೀಕೆರೆ