ಮುಂಬಯಿ: ಮುಂಬಯಿಯ ಪ್ರತಿಷ್ಠಿತ ಶಿಕ್ಷಣ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾದ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ ಸಾಹಿತ್ಯ- ಸಂಸ್ಕೃತಿ, ಸಮ್ಮಾನ ಸಂಭ್ರಮ “ಸಾಹಿತ್ಯ ಸಹವಾಸ 2017-18′ ಕಾರ್ಯಕ್ರಮವು ಡಿ.24ರಂದು ಸಂಜೆ ಉದ್ಘಾಟಿಸಲ್ಪಟ್ಟಿತು.
ಮುಂಬಯಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಂ.ಎಂ. ಪ್ರಸನ್ನ (ಐಪಿಎಸ್) ಪ್ರಧಾನ ಅಭ್ಯಾಗತರಾಗಿ ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ವಾರ್ಷಿಕ ಪ್ರತಿಷ್ಠಿತ “ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ-2017′ ಪುರಸ್ಕೃತ ಗೌರವಾನ್ವಿತ ಶಿಕ್ಷಣಾಭಿಮಾನಿ, ಸಮಾಜ ಸೇವಕ ಹರೇಕಲ ಹಾಜಬ್ಬ, “ದಿ| ವೈ.ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾದ ನಿವೃತ್ತ ಶಿಕ್ಷಕಿ ಲೀಲಾವತಿ ಕೆ.ಶೆಟ್ಟಿ, “ಸುಬ್ಬಯ್ಯ ಶೆಟ್ಟಿ ದತ್ತಿ’ ಗೌರವ ಪುರಸ್ಕಾರಕ್ಕೆೆ ಆಯ್ಕೆಯಾದ ಹಿರಿಯ ರಂಗಕರ್ಮಿ ಉಮೇಶ್ ಎನ್.ಶೆಟ್ಟಿ ಹಾಗೂ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ’ಗೆ ಭಾಜನರಾದ ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಸಂಘದ ಉಪಾಧ್ಯಕ್ಷ ಪ್ರಭಾಕರ ಬಿ.ಬೋಳಾರ್, ಗೌ| ಪ್ರ| ಕಾರ್ಯದರ್ಶಿ ರಂಜನ್ ಕುಮಾರ್ ಆರ್.ಅಮೀನ್, ಗೌ| ಕೋಶಾಧಿಕಾರಿ ಟಿ. ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ದೇವದಾಸ್ ಕೆ.ಶೆಟ್ಟಿಗಾರ್, ಜೊತೆ ಕೋಶಾಧಿಕಾರಿ ಸುಂದರ್ ಎನ್.ಕೋಟ್ಯಾನ್, ಸಾಂಸ್ಕೃತಿಕ ಉಪ ಸಮಿತಿ ಕಾರ್ಯದರ್ಶಿ ದಯಾಸಾಗರ್ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಯ ಎನ್.ಶೆಟ್ಟಿ, ಗುಣಾಕರ್ ಎಚ್.ಹೆಗ್ಡೆ, ಯೋಗೆಶ್ ವಿ. ಗುಜರನ್, ಮಧುಕರ್ ಜಿ.ಬೈಲೂರು, ಮೋಹನ್ ಎಸ್.ಕಾಂಚನ್, ಚಂದ್ರಶೇಖರ್ ಎ.ಅಂಚನ್, ಅಶೋಕ್ ಸಾಲ್ಯಾನ್, ಜಯ ಎಂ.ಶೆಟ್ಟಿ, ಸುಧೀರ್ ಪುತ್ರನ್, ಸಂಜೀವ ಎಸ್.ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಯ ಎನ್.ಶೆಟ್ಟಿ, ದಕ್ಷಿಣ ಕನ್ನಡ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೆಪುಣಿ ಸೇರಿದಂತೆ ಕನ್ನಡ ಶಿಕ್ಷಣಾಭಿಮಾನಿಗಳು, ಸಂಸ್ಕೃತಿ ಪ್ರಿಯರು, ಕಲಾಸಕ್ತರು, ಸಂಘದ ವಿವಿಧ ವಿದ್ಯಾಲಯಗಳ ಶಿಕ್ಷಕರು, ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ನೂಪುರ್ ಡ್ಯಾನ್ಸ್ ಅಕಾಡೆಮಿ ತಂಡ ಹಾಗೂ ಭರತ್ ಶೆಟ್ಟಿ ಬಳಗ ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ವೈಭವ ಸಾರುವ ಸಂಸ್ಕೃತಿ ಉತ್ಸವವನ್ನು ಹಾಗೂ ಸಂಘದ ಚೆಂಬೂರು ಕರ್ನಾಟಕ ಪೂರ್ವ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯ ಮತ್ತು ಕಾನೂನು ಕಾಲೇಜು ವಿದ್ಯಾರ್ಥಿಗಳು ವೈವಿಧ್ಯಮಯ ವಿನೋದಾವಳಿಗಳನ್ನು ಪ್ರಸ್ತುತ ಪಡಿಸಿದರು.
ಚಿತ್ರ,ವರದಿ: ರೋನ್ಸ್ ಬಂಟ್ವಾಳ್