Advertisement

ಚೆಲುವ ಚಾಮರಾಜನಗರ ಅಭಿಯಾನ

03:00 PM Oct 09, 2020 | Suhan S |

ಚಾಮರಾಜನಗರ: ಚಾಮರಾಜನಗರವು ಕಲೆ, ಸಂಸ್ಕೃತಿ, ವಿಶಿಷ್ಟತೆ ಹೊಂದಿದ್ದು, ಜಿಲ್ಲೆಯನ್ನು ‌ಸ್ವಚ್ಛ ಹಾಗೂ ಸುಂದರಗೊಳಿಸುವ ಸಲುವಾಗಿ ಚೆಲುವ ಚಾಮರಾಜನಗರ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯ ಸ‌ಭಾಂಗಣದಲ್ಲಿ ವಿವಿಧ ಇಲಾಖೆಗಳ ‌ ಅಧಿಕಾರಿಗಳೊಂದಿಗೆ ನಡೆದ ಪ್ರಗ‌ತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಅಭಿಯಾನ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ

ಸಂಘಸಂಸ್ಥೆಗಳ ಸಹಭಾಗಿತ್ವ ಆಯೋಜಿಸಬೇಕಾಗಿದೆ. ಅಭಿಯಾನ ‌ ಒಂದು ಯೋಜನೆಯಾಗಿರದೇ ಸಮುದಾಯಿಕ ಪಾಲ್ಗೊಳ್ಳುವಿಕೆಯ ನಿರಂತರ ‌ ಪ್ರಕ್ರಿಯೆಯಾಗಿರುವುದರಿಂದ ಎಲ್ಲರ ಈ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.

ಸೆಲ್ಫಿ ಪಾಯಿಂಟ್‌: ಜಿಲ್ಲೆಯ ನಗರ ‌, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಿವಿಧೆಡೆ ಸೆಲ್ಫಿ ಪಾಯಿಂಟ್‌ ಗಳನ್ನು ತೆರೆಯಲಾಗುತ್ತಿದೆ. ನ‌ಗರದ ಜಿಲ್ಲಾಡಳಿತ ‌ ಭವನದ ಅಂಬೇಡ್ಕರ್‌ ಪ್ರತಿಮೆ ಬಳಿ, ಜಿಲ್ಲಾಡಳಿತ ಭವನದ ಉದ್ಯಾನವನ, ಸುಲ್ತಾನ್‌ ಷರೀಫ್ ವೃತ್ತದ ಬಳಿ, ಭುವನೇಶ್ವರಿ ‌  ವೃತ್ತದ ‌ ಬಳಿ ಸೆಲ್ಫಿ ಪಾಯಿಂಟ್‌ಗಳನ್ನು ತೆರೆಯಲು ಆಡಳಿತಾತ್ಮಕ ‌ ಅನುಮೋದನೆ ಪಡೆದು ಟೆಂಡರ್‌ ಕರೆಯುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಫ‌ುಡ್‌ಜೋನ್‌: ಸಾರ್ವಜನಿಕರ ಅನುಕೂಲಕ್ಕಾಗಿ ಮಾದರಿ ಆಹಾರ (ಫ‌ುಡ್‌ ಜೋನ್‌) ವಲಯಗಳನ್ನು ತೆರೆಯಲು ಜಾಗ ಗುರುತಿಸುವ‌ ಕಾರ್ಯ ಆಗಬೇಕು. ನಗರದ ವೀರಭದ್ರೇಶ್ವರ ‌ ದೇವಾಲಯದ ಬಳಿ ಈಗಾಗಲೇ ಜಾಗ ‌ ಗುರುತಿಸಲಾಗಿದೆ. ತರಕಾರಿ ಮಾರುಕಟ್ಟೆ ಸ್ಥಳದಲ್ಲಿ ಆಗಬೇಕಾಗಿದೆ ಫ‌ುಡ್‌ ಜೋನ್‌ ವಲಯವನ್ನು ಬೇರೆಡೆ ‌ ಸ್ಥಳಾಂತರಿಸುವ ‌ ಅಗತ್ಯವಿದೆ. ಇದಕ್ಕಾಗಿ ತ್ವರಿತವಾಗಿ ಜಾಗ ಗುರುತಿಸಿ ಎಂದರು.

Advertisement

ಪ್ರವಾಸಿ ತಾಣ ಅಭಿವೃದ್ಧಿ:  ‌ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕ‌ರಿವರದರಾಯನಬೆಟ್ಟಕ್ಕೆ ಅಗತ್ಯ ಮೂಲಸೌಕರ್ಯ, ಚಿಕ್ಕಹೊಳೆ, ಸುವರ್ಣಾವತಿ ಜಲಾಶಯಗಳಲ್ಲಿ ಉದ್ಯಾನ ನಿರ್ಮಾಣ, ನಗರದ ಸುಬೇದಾರ್‌ ಕಟೆ rಯ ಬಳಿ ಇರುವ ಪುಷ್ಕರಿಣಿ, ಯಳಂದೂರಿನ ಷಡಕ್ಷರಿದೇವನ ಗದ್ದುಗೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಒಟ್ಟಾರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ವಿಡಿಯೋ ಚಿತ್ರೀಕರಣಗೊಳಿಸಿಡಾಕ್ಯುಮೆಂಟರಿಮಾಡುವಂತೆ ನಿರ್ದೇಶನ ನೀಡಿದರು.

ಬೆಗಾರರಿಗೆ ಸಾಲ ಸೌಲಭ್ಯ: ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರು, ನೂಲು ಬಿಚ್ಚಣಿಕೆದಾರರಿಗೆ ಅನುಕೂಲವಾಗುವಂತೆ ಅನುದಾನವನು ಮೂಲಬಂಡವಾಳ, ದುಡಿಮೆ ಬಂಡವಾಳವನ್ನಾಗಿ ಪರಿವರ್ತಿಸಿ ತರಬೇತಿ ನೀಡಲಾಗುವುದು.. ಇದಕ್ಕಾಗಿ ಫಲಾನುಭವಿಗಳನ್ನು ಗುರುತಿಸಿ ಸಾಲ ಒದಗಿಸಲು ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ಕರೆದು ಚರ್ಚಿಸುವಂತೆ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಜವರೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ‌ ಯೋಜನಾ ನಿರ್ದೇಶಕ ಕೆ. ಸುರೇಶ್‌, ತ‌ಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ. ಕುನಾಲ್‌, ಗಣಿ ಮತ್ತು ಭೂವಿಜ್ಞಾನ ‌ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಇತರರಿದ್ದರು.

ಶತಮಾನ ಪೂರೈಸಿರುವ 35 ಶಾಲೆಗಳ ಅಭಿವೃದ್ಧಿಗೆ ಹಣ :  ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ35 ಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 11, ಗುಂಡ್ಲುಪೇಟೆ 10, ಹನೂರು 2,ಕೊಳ್ಳೇಗಾಲ 10 ಮತ್ತು ಯಳಂದೂರಿನಲ್ಲಿ100 ವರ್ಷಗಳನ್ನು ಕಂಡಿರುವ2ಶಾಲೆಗಳಿಗೆ ಪ್ರತಿಶಾಲೆಗೆ5ಲಕ್ಷ ರೂ. ಮೀಸಲಿಡಲಾಗಿದೆ.ಈಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲು ಕ್ರಿಯಾಯೋಜನೆ ಅಂತಿಮಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಗ್ರಾನೈಟ್‌ಗೆ ಸಾಕಷ್ಟುಬೇಡಿಕೆ, ಯುವಜನರಿಗೆ ತರಬೇತಿ : ಜಿಲ್ಲೆಯ ಗ್ರಾನೈಟ್‌ಗೆ ಇತರೆಡೆ ತುಂಬಾ ಬೇಡಿಕೆ ಇದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ ಕೌಶಲ್ಯಾಭಿವೃದ್ಧಿತರಬೇತಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸ್ವಯಂಉದ್ಯೋಗ ಕಲ್ಪಿಸಬೇಕು. ಗ್ರಾನೈಟ್‌ಕಟಿಂಗ್‌, ಡಿಸೈನ್‌, ಡ್ರಿಲ್ಲಿಂಗ್‌, ಪಾಲಿಶ್‌ ಸೇರಿದಂತೆ 5 ಬಗೆಯ ತರಬೇತಿ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ರವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next