Advertisement

Crispy Fried Chicken ಪರಿಚಯಿಸಿದ ಮ್ಯಾಕ್ಡೊನಾಲ್ಡ್ಸ್ ಇಂಡಿಯಾ; ಕಿಚ್ಚ ಪ್ರಚಾರ ರಾಯಭಾರಿ

02:23 PM Aug 29, 2024 | Team Udayavani |

ಬೆಂಗಳೂರು: ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ಫ್ರೈಡ್ ಚಿಕನ್  ಉತ್ಪನ್ನವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಕಾರ್ಯತಂತ್ರದ ಭಾಗವಾಗಿ, ವೆಸ್ಟ್‌ಲೈಫ್ ಫುಡ್‌ವರ್ಲ್ಡ್ ಒಡೆತನದಲ್ಲಿ ಇರುವ  ಮತ್ತು  ಅದರಡಿ ಕಾರ್ಯನಿರ್ವಹಿಸುತ್ತಿರುವ ಮ್ಯಾಕ್‌ಡೊನಾಲ್ಡ್ಸ್‌ ಇಂಡಿಯಾ (ಡಬ್ಲ್ಯುಆ್ಯಂಡ್‌ ಎಸ್) ಗರಿಗರಿಯಾದ ʼಕ್ರಿಸ್ಪಿ ಫ್ರೈಡ್ ಚಿಕನ್ʼ ಪರಿಚಯಿಸುತ್ತಿರುವುದಾಗಿ ತಿಳಿಸಿದೆ.

Advertisement

ಈ  ಹಿಂದೆಂದಿಗಿಂತಲೂ ಹೆಚ್ಚು ಗರಿಗರಿಯಾಗಿರುವ ಈ ಫ್ರೈಡ್ ಚಿಕನ್, ದಕ್ಷಿಣ ಭಾರತದಲ್ಲಿ ಬ್ರ್ಯಾಂಡ್‌ನ ಚಿಕನ್ ಉತ್ಪನ್ನದ ಜನಪ್ರಿಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.

ಈ ಮ್ಯಾಕ್‌ಡೊನಾಲ್ಡ್ಸ್‌ ಇಂಡಿಯಾ ತನ್ನ ಹೊಸ   ಅಭಿಯಾನವಾಗಿರುವ – ‘ಲೆಟ್ ದಿ ಕ್ರಂಚ್ ಟೇಕ್‌ ಓವರ್’-ಗೆ ಪ್ರಚಾರ ರಾಯಭಾರಿಯಾಗಿ ಕನ್ನಡದ ಜನಪ್ರಿಯ ಚಿತ್ರ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next