ಚೇಳೂರು: ಚೇಳೂರಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ಬೆಂಬಲಿತ ಬೇಕರಿ ಸತೀಶ್ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎನ್.ಯತೀಶ್ ಹಾಗೂ ಸತೀಶ್ ಇವರುಗಳು ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದರು.
ಈ ಪಂಚಾಯಿತಿ ಯಲ್ಲಿ ಒಟ್ಟು 22 ಸದಸ್ಯರುಗಳು ಇದ್ದು ಚುನಾವಣೆಯಲ್ಲಿ 18 ಸದಸ್ಯರು ಸತೀಶ್ ಪರ ಮತ ಹಾಕಿದ್ದಾರೆ.ಸಿ.ಎನ್.ಯತೀಶ್ ಗೆ 4 ಮಾತುಗಳು ಪರ ಬಂದಿದ್ದು, ಚುನಾವಣೆ ಅಧಿಕಾರಿಯಾಗಿ ಬಂದಿದ್ದ ತಹಶೀಲ್ದಾರ್ ಆರತಿಯವರು ಅಭ್ಯರ್ಥಿ ಸೇರಿ 18 ಮತವನ್ನು ಪಡೆದಿದ್ದ ಸತೀಶ್ ಇವರನ್ನು ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಮಾತನಾಡಿ, ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸ್ವಚ್ಛತೆ,ಸರ್ಕಾರದಿಂದ ಸಾರ್ವಜನಿಕರಿಗೆ ಬೀಗುವ ಸೌಲಭ್ಯಗಳು, ಎಲ್ಲಾ ಸದಸ್ಯರು ಸಹಕಾರ, ಶಾಸಕರ ಸಹಕಾರದಿಂದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತಾನೆ. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲೋಪದೋಷಗಳು ಬರದ ಹಾಗೆ ಸಾರ್ವಜನಿಕರ ಪರ ಕೆಲಸಗಳನ್ನು ಮಾಡುತ್ತೇನೆ ಎಂದರು.
ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಕಂದಾಯಾಧಿಕಾರಿ ನಾಗಭೂಷಣ್.ರವೀಶ್.ಪಿಡಿಒ ಶ್ರೀನಿವಾಸ್ ಭಾಗವಹಿಸಿದ್ದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎನ್.ನಾಗರಾಜು, ಗುರು ರೇಣುಕರಾಧ್, .ಸಿ.ಎನ್.ವೆಂಕಟೇಶ, ಮಹದೇವಯ್ಯ, ರಾಮಕೃಷ್ಣಯ್ಯ, ರಂಗದಾಮಯ್ಯ, ಮೋಹನಕುಮಾರ್. ಸಿ.ಡಿ.ಗೋಪಿ, ಕಾರ್ತೀಕೆಯನ್,ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರರು ಇದ್ದರು.