ವಿಟ್ಲ: ಜಗತ್ತಿನ ಅತ್ಯುನ್ನತ ಸಿನೆಮಾ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್‌ಗೆ ಈ ವರ್ಷ ಭಾರತದ ಅಧಿಕೃತ ಪ್ರವೇಶ ಪಡೆದ ಗುಜರಾತಿ ಭಾಷೆಯ “ಛೆಲ್ಲೋ ಶೋ’ ಚಿತ್ರವು 15ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಈ ಚಿತ್ರದ ಸಂಕಲನದ ಹೊಣೆಗಾರಿಕೆಯನ್ನು ಜಿಲ್ಲೆಯ ಉಪ್ಪಿನಂಗಡಿ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿ ಪವನ್ ಭಟ್ ನಿರ್ವಹಿಸಿದ್ದು, ಕರ್ನಾಟಕಕ್ಕೂ ಹೆಮ್ಮೆಯೆನಿಸಿದೆ.
ಸೆಪ್ಟಂಬರ್‌ನಲ್ಲಿ ಪ್ರಥಮ ಸುತ್ತಿನಲ್ಲಿ 92 ದೇಶಗಳ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದುಕೊಂಡಿದ್ದವು. ಬೆಸ್ಟ್ ಇಂಟರ್‌ನ್ಯಾಶನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ 92 ಚಿತ್ರಗಳನ್ನು ವಿಶ್ಲೇಷಿಸಿದ ಅಕಾಡೆಮಿಯು ಲಾಸ್ಟ್ ಫಿಲ್ಮ್ ಶೋ(ಛೆಲ್ಲೋ ಶೋ)ವನ್ನು 15ರ ಪಟ್ಟಿಯಲ್ಲಿ ಆಯ್ಕೆ ಮಾಡಿದೆ. ಕಳೆದ 21 ವರ್ಷಗಳಲ್ಲಿ ಭಾರತೀಯ ಚಿತ್ರವೊಂದು ಈ ಪಟ್ಟಿಗೇರಿಲ್ಲ ಮತ್ತು ಭಾರತೀಯ ಚಿತ್ರಗಳಲ್ಲಿ ಈ ಸ್ಥಾನಕ್ಕೇರಿದ ನಾಲ್ಕನೇ ಚಿತ್ರ ಇದಾಗಿದೆ.
5 ಚಿತ್ರಗಳ ಪಟ್ಟಿಯು 2024ರ ಜ. 24ರಂದು ಹೊರಬೀಳಲಿದೆ ಮತ್ತು 2023ರ ಮಾರ್ಚ್ 12ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಪವನ್ ಭಟ್ ಮತ್ತು ಬೆಳ್ತಂಗಡಿ ಮೂಲದ ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಿರುವ ಶ್ರೇಯಸ್ ಕೂಡ ಈ ಚಿತ್ರದ ಸಂಕಲನ ಮಾಡಿದ ಕನ್ನಡಿಗರು.