Advertisement

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಮಾಜಿ ಅಧ್ಯಕ್ಷ ಚೆಲ್ಲಿಮಕ್ಕಿ ಗೋಪಾಲ ಗಾಣಿಗ ನಿಧನ

09:59 PM Jul 23, 2020 | Hari Prasad |

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಮಾಜಿ ಅಧ್ಯಕ್ಷ ಸಾಸ್ತಾನದ ಚೆಲ್ಲೆಮಕ್ಕಿ ನಿವಾಸಿ ಗೋಪಾಲ ಗಾಣಿಗ ಚೆಲ್ಲೆಮಕ್ಕಿ (71) ಜು.23ರಂದು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

Advertisement

ಮೃತರು ತಾಯಿ, ಪತ್ನಿ ಹಾಗೂ ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರವೀಣ್ ಸೇರಿದಂತೆ ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಇವರು ಸಾಲಿಗ್ರಾಮ ಪುರಸಭೆಯಾಗಿದ್ದ ಅವಧಿಯಲ್ಲಿ ಸದಸ್ಯರಾಗಿದ್ದರು ಹಾಗೂ ಚೆಲ್ಲೆಮಕ್ಕಿ ನಾಗ ಬನ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು ಉಪಾಧ್ಯಕ್ಷರಾಗಿ, ಬಾರ್ಕೂರು ವೇಣುಗೋಪಾಲಕೃಷ್ಣ ಸೌಹಾರ್ದ ಸಹಕಾರಿ ಸಂಘದ  ನಿರ್ದೇಶಕರಾಗಿ, ಗುಂಡ್ಮಿ ಮಾಣಿಚೆನ್ನಕೇಶವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next