Advertisement
ಮೃಗಾಲಯದಲ್ಲಿ ಗುರುವಾರ ಬೆಳಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚೀತಾಗಳನ್ನು ವೀಕ್ಷಿಸಿ ಬಳಿಕ ಸಾರ್ವಜನಿಕ ವೀಕ್ಷಣೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಚಾಮರಾಜೇಂದ್ರ ಮೃಗಾಲಯಕ್ಕೆ ಕರೆತರಲಾಗಿದ್ದ ಎರಡು ಹೆಣ್ಣು ಮತ್ತು ಒಂದು ಗಂಡು ಚೀತಾ ಮರಿ ಗಳನ್ನು2 ತಿಂಗಳ ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಬಳಿಕ ಮಾತನಾಡಿದ ಸಚಿವರು, ಆಗಸ್ಟ್ 17 ರಂದು ಪ್ರಾಣಿ ವಿನಿಮಯ ಯೋಜನೆಯಡಿ ದಕ್ಷಿಣ ಆಫ್ರಿಕಾದಿಂದಒಂದು ಗಂಡು,ಎರಡುಹೆಣ್ಣುಚೀತಾ ಗಳನ್ನು ಮೈಸೂರು ಮೃಗಾಲಯಕ್ಕೆ ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಮೂಲಕ ಕರೆತರಲಾಗಿದೆ. ದೇಶದಲ್ಲಿ ಹೈದರಾಬಾದ್ ಬಿಟ್ಟರೆ ಮೈಸೂರಿನಲ್ಲಿ ಮಾತ್ರ ಚೀತಾಗಳು ಇವೆ ಎಂದು ತಿಳಿಸಿದರು.
Related Articles
Advertisement
ಚೀತಾಗೆ ಕುದುರೆ, ಜೀಬ್ರಾ ಮಾಂಸ ಅಚ್ಚುಮೆಚ್ಚು : ಆಫ್ರಿಕಾದಿಂದ ಮೈಸೂರು ಮೃಗಾಲಯಕ್ಕೆ ಆಗಮಿಸಿರುವ ಮೂರು ಹಂಟಿಂಗ್ ಚೀತಾಗಳುಆರಂಭದಲ್ಲಿ ಇಲ್ಲಿನ ಆಹಾರ ಪದ್ಧತಿಗೆ ಒಗ್ಗಿಕೊಳ್ಳದೇ ನಾಲ್ಕು ದಿನ ಆಹಾರ ತಿರಸ್ಕರಿಸಿದ್ದವು. ಆಫ್ರಿಕಾದಲ್ಲಿ ಇವುಗಳಿಗೆಕುದುರೆ, ಜೀಬ್ರಾ ಮಾಂಸ ನೀಡಲಾಗುತ್ತಿತ್ತು. ಆದ್ದರಿಂದ ಚೀತಾಗಳು ಇಲ್ಲಿನ ಆಹಾರವನ್ನು ತಿನ್ನುತ್ತಿರಲಿಲ್ಲ. ಬಳಿಕ ಚೈನಿಸ್‌ಕ್ವಿಲ್ ಪಕ್ಷಿ ಮಾಂಸವನ್ನು ನೀಡಿದಾಗ ತಿಂದವು. ಇದಾದ ನಂತರ ಚೈನಿಸ್‌ಕ್ವಿಲ್ ಪಕ್ಷಿ ಮಾಂಸದೊಂದಿಗೆಕೋಳಿ ಮತ್ತು ಬೀಫ್ ಮಾಂಸ ಮಿಶ್ರಣ ಮಾಡಿ ತಿನ್ನಿಸಿ, ಇಲ್ಲಿನ ಆಹಾರ ಪದ್ಧತಿಗೆ ಒಗ್ಗಿಕೊಳ್ಳುವಂತೆ ಮಾಡಿದ್ದೇವೆ. ಸದ್ಯಕ್ಕೆ ಬೀಫ್ ಮತ್ತುಕೋಳಿ ಮಾಂಸವನ್ನು ನೀಡಲಾಗುತ್ತಿದೆ ಮೃಗಾಲಯ ಕಾರ್ಯನಿರ್ವಹಕ ನಿರ್ದೇಶಕ ಅಜಿತ್‌ಕುಲಕರ್ಣಿ ತಿಳಿಸಿದರು. ಚೀತಾಗಳು ಬೆಕ್ಕಿನ ಜಾತಿಗೆ ಸೇರಿರುವುದರಿಂದ ಆರಂಭದಲ್ಲಿ ವಂಶಾಭಿವೃದ್ಧಿ ತಡವಾದರೂ, ನಂತರ ಹೆಚ್ಚು ಹೆಚ್ಚು ಮರಿಗಳಿಗೆ ಜನ್ಮ ನೀಡುತ್ತವೆ. ಒಂದು ಚೀತಾ ಒಂದರಿಂದ ಐದು ಮರಿಗಳಿಗೆ ಜನ್ಮ ನೀಡುತ್ತವೆ ಎಂದು ಮಾಹಿತಿ ನೀಡಿದರು.