Advertisement

ಚಾಮುಂಡಿಬೆಟ್ಟದ ರಸ್ತೆಯಲ್ಲಿ ಚಿರತೆ

11:48 AM Feb 02, 2018 | |

ಮೈಸೂರು: ಚಾಮುಂಡಿ ಬೆಟ್ಟದ ಮೇಲಿನ ರಸ್ತೆಯಲ್ಲಿ ಬುಧವಾರ ರಾತ್ರಿ ಚಿರತೆಯೊಂದು ವಾಹನಗಳ ಸದ್ದಿಗೂ ಹೆದರದೆ ರಸ್ತೆಯಲ್ಲಿ ನಿಧಾನವಾಗಿ ಮುಂದೆ ಸಾಗುತ್ತಾ, ಅಲ್ಲಲ್ಲಿ ಕುಳಿತು ಮೊಬೈಲ್‌ ಚಿತ್ರೀಕರಣಕ್ಕೆ ಫೋಸ್‌ ಕೊಟ್ಟಿದೆ. ಈ ದೃಶ್ಯವನ್ನು ವಿಡಿಯೋ ಮಾಡಿರುವ ವಾಹನ ಸವಾರರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Advertisement

ಎರಡು ದಿನಗಳ ಹಿಂದಷ್ಟೇ ಚಾಮುಂಡಿಬೆಟ್ಟದ ತಪ್ಪಲಿನ ರಸ್ತೆಯಲ್ಲಿ ರಾತ್ರಿ ವೇಳೆ ಒಂದು ಮುಳ್ಳು ಹಂದಿ, ಅದರ ಹಿಂದೆ ಚಿರತೆ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಜತೆಗೆ ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದ ಕುರುಚಲು ಗಿಡಗಳ ಮಧ್ಯೆ ಚಿರತೆ ಓಡಾಡಿರುವ ದೃಶ್ಯ ವಿಮಾನ ನಿಲ್ದಾಣದ ಸಿಸಿ ಟೀವಿಯಲ್ಲಿ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next