Advertisement

ಮೃಗಾಲಯಕ್ಕೆ ನುಗ್ಗಿ ಮರವೇರಿ ಕುಳಿತ ಗಂಡು ಚಿರತೆ ಸೆರೆ!

02:53 PM Oct 26, 2017 | Team Udayavani |

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಚಿರತೆಯೊಂದು ಮರವೊಂದರ ಮೇಲೆ  ಪ್ರತ್ಯಕ್ಷವಾಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

Advertisement

ಮರವೇರಿ ಕುಳಿತಿದ್ದ ಚಿರತೆಯನ್ನು ಕಂಡು ಪ್ರವಾಸಿಗರು ಆತಂಕಗೊಂಡಿದ್ದಾರೆ.ಕೂಡಲೇ ಮೃಗಾಲಯದ ಸಿಬಂದಿಗಳು ವೀಕ್ಷಕರನ್ನು ಹೊರಗಿನಿಂದ ಒಳ ಪ್ರವೇಶಿಸುವುದಕ್ಕೆ ತಡೆ ಒಡ್ಡಿ ಕಾರ್ಯಾಚರಣೆಗೆ ಸಹಕರಿಸಿದರು. 

ಅರಣ್ಯ ಸಿಬಂದಿಗಳು ತಕ್ಷಣ ಕಾರ್ಯಾಚರಣೆಗಿಳಿದು ಅರಿವಳಿಕೆ ಚಚ್ಚು ಮದ್ದು ನೀಡಿ ಒಂದೂವರೆ ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿದಿದ್ದಾರೆ. 

ಮೃಗಾಲಯದಲ್ಲಿರುವ ಚಿರತೆಗಳೆಲ್ಲಾ ಬೋನಿನೊಳಗೆ ಇದ್ದು, ಈ ಚಿರತೆ ಹೊರಗಿನಿಂದ ಬಂದಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.  

ಚಾಮುಂಡಿ ಬೆಟ್ಟ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಇದಾಗಿದೆ ಎಂದು ಹೇಳಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next