ಘಟನೆ ತಾಲೂಕಿನ ಸಂಗಬಸವನದೊಡ್ಡಿಯಲ್ಲಿ ನಡೆದಿದೆ.
Advertisement
ಸೋಮವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಆಹಾರ ಅರಸಿ ಸಂಗಬಸನವದೊಡ್ಡಿ ಗ್ರಾಮಕ್ಕೆ ಬಂದ ಚಿರತೆಗೆ ರವಿ ಎಂಬುವರಿಗೆ ಸೇರಿದ ಮನೆಯ ಬಳಿ ನಾಯಿಯೊಂದು ಕಾಣಿಸಿಕೊಂಡಿದೆ. ಅದನ್ನು ಬೇಟೆಯಾಡಲು ಮುಂದಾದಾಗ ನಾಯಿ ತಪ್ಪಸಿಕೊಂಡು ಅಲ್ಲೆ ಇದ್ದ ದನಕ ಕೊಠಡಿಯೊಳಗೆ ನುಗ್ಗಿದೆ. ಚಿರತೆಯೂ ದನದ ಕೊಟ್ಟಿಗೆಗೆ ನುಗ್ಗಿದೆ, ಆದರೆ ನಾಯಿ ತಪ್ಪಿಸಿಕೊಂಡು ಹೊರ ಬಂದು ತೀವ್ರವಾಗಿ ಬೊಗಳಲಾರಂಭಿಸಿದೆ. ಸದ್ದು ಕೇಳಿ ಬಂದ ಸುತ್ತಮುತ್ತಲಿನ ಮನೆಯವರು ದನದ ಕೊಟ್ಟಿಗೆಯಲ್ಲಿರುವ ಚಿರತೆ ಕಂಡು ಹೌಹಾರಿ, ಕೊಟ್ಟಿಗೆಯ ಬಾಗಿಲನ್ನು ಭದ್ರಪಡಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರನ್ನು ಕರೆಸಿಕೊಂಡು ಕೊಟ್ಟಿಗೆಯಲ್ಲಿ ಬಂಧನವಾಗಿದ್ದ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ಧಾರೆ. ಪ್ರಜ್ಞೆ ತಪ್ಪಿದ ಚಿರತೆಯನ್ನು ಬೋನಿನಲ್ಲಿಕೂಡಿಹಾಕಿದ್ದಾರೆ.