Advertisement

ಚಿರತೆ ಶೋಧಕ್ಕೆ  ಅರಣ್ಯ ಇಲಾಖೆ ಅಧಿಕಾರಿಗಳ ಕಸರತ್ತು

08:07 PM May 31, 2021 | Team Udayavani |

ಬ್ಯಾಡಗಿ: ತಾಲೂಕಿನಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುವ ಚಿರತೆ ಹುಡುಕುವಲ್ಲಿ ವಲಯ ಅರಣ್ಯ ಇಲಾಖೆ ಅಧಿ ಕಾರಿಗಳು ಮುಂದಾಗಿದ್ದಾರೆ. ತಾಲೂಕಿನಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಿರುವ ಚಿರತೆಯೊಂದು ಕೃಷಿಕರು ಸೇರಿದಂತೆ ಸಾರ್ವಜನಿಕರು, ದಾರಿಹೋಕರ ನಿದ್ದೆಗೆಡಿಸಿದೆ.

Advertisement

ಚಿರತೆ ಹಾವಳಿಗೆಯಿಂದಾಗಿ ಈಗಾಗಲೇ ಗ್ರಾಮೀಣ ಭಾಗದ ಜನರು ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುತ್ತಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವು ಜನರಿಗೆ ಚಿರತೆ ತನ್ನ ಇರುವಿಕೆ ತೋರಿಸಿದೆ. ಇದರಿಂದ ಭಯಭೀತರಾಗಿ ಮನೆಯಿಂದ ಹೊರಗೆ ಬಾರದೇ ಉಳಿದಿದ್ದಾರೆ.

ಚಿರತೆ ಹಾವಳಿಯಿಂದಾಗಿ ಹೊಲಗಳಿಗೆ ತೆರಳಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ಸಹ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ನೆಲ್ಲಿಕೊಪ್ಪ ಗ್ರಾಮದ ಬಳಿ ಈಗಾಗಲೇ ಜಿಂಕೆಯೊಂದನ್ನು ಕೊಂದ ಚಿರತೆ ಅರಣ್ಯ ಪ್ರದೇಶದಲ್ಲಿ ಸಂಚಾರ ಮಾಡುತ್ತಿರುವ ಬಗ್ಗೆ ಅನುಮಾನಗಳಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಾಲೂಕಿನ ಹಿರೇಅಣಜಿ ಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಕುರಿತು ಮಾಹಿತಿಯನ್ನು ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next