ಎಚ್.ಡಿ.ಕೋಟೆ: ಕಾಡಿನಿಂದ ನಾಡಿಗೆ ಬಂದು ಸಾಕುಪ್ರಾಣಿಗಳನ್ನು ಕೊಂದು ಜನರಲ್ಲಿ ಭಯ ಭೀತಿಗೊಳಿಸಿದ್ದಗಂಡು ಚಿರತೆ ಕಡೆಗೂ ಅರಣ್ಯ ಇಲಾಖೆ ಇರಿಸಿದ್ದಬೋನಿನಲ್ಲಿ ಬಂಧಿಯಾಗಿದೆ.
ತಾಲೂಕಿನ ಮಾದಾಪುರದ ಚಿಕ್ಕರೆಯೂರು ಗ್ರಾಮಕ್ಕೆಸಂಪರ್ಕ ಕಲ್ಪಿಸುವ ಜಮೀನೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದ ಚಿರತೆ ಆಗಾಗ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದರ ಜೊತೆಗೆ ಗ್ರಾಮದ ಆಸು ಪಾಸಿನಲ್ಲಿ ಗೋಚರಿಸಿ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಚಿರತೆ ಸೆರೆಗೆ ಗ್ರಾಮಸ್ಥರು ಎಚ್.ಡಿ.ಕೋಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಆಗ್ರಹಿಸಿದ್ದರು. ಹೀಗಾಗಿ ಜಮೀನಿನೊಂದರಲ್ಲಿ ಬೋನ್ ಅಳವಡಿಸಿ, ಅದರಲ್ಲಿ ಸಾಕು ನಾಯಿಯೊಂದನ್ನು ಇರಿಸಲಾಗಿತ್ತು. ಮಂಗಳವಾರ ತಡರಾತ್ರಿ ನಾಯಿ ಚೀರಾಟ ಆಲಿಸಿದ ಚಿರತೆಯು ಬೇಟೆಗೆಂದು ಬೋನಿನೊಳಗೆ ನುಸುಳುತ್ತಿ ದಂತೆ ಬಂಧಿಯಾಗಿದೆ. ಇದೀಗ ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟಿದ್ದಾರೆ.
ಸುಮಾರು 4 ವರ್ಷದ ಚಿರತೆ ಬೋನಿಗೆ ಸಿಕ್ಕಿಬಿದ್ದ ವಿಷಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತಿದ್ದಂ ತೆಯೇ, ರಾತ್ರಿಯೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸೆರೆಸಿಕ್ಕ ಚಿರತೆಯನ್ನು ಎಚ್.ಡಿ.ಕೋಟೆ ಅರಣ್ಯ ಇಲಾಖೆ ಕಚೇರಿ ಬಳಿ ಸ್ಥಳಾಂತರಿಸಿದ್ದಾರೆ. ಸೆರೆ ಸಿಕ್ಕ ಚಿರತೆ ಕಣ್ತುಂಬಿಕೊಳ್ಳಲು ನೂರಾರು ಮಂದಿ ಕಚೇರಿಗೆ ಧಾವಿಸಿದ್ದರು. ಇವರನ್ನು ನಿಯಂ ತ್ರಿ ಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡಬೇಕಾ ಯಿತು. ಚಿರತೆ ಆರೋಗ್ಯವಂತವಾಗಿದ್ದು, ಪಶು ವೈದ್ಯ ರಿಂದ ತಪಾಸಣೆ ನಡೆಸಿದ ಬಳಿಕ ಸೆರೆಯಾದ ಚಿರತೆ ಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವಲಯದಲ್ಲಿ ಬಿಡಲು ಅರಣ್ಯ ಇಲಾಖೆ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.