Advertisement

ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಮದ ಬಳಿ ರೈಲಿನಡಿ ಸಿಲುಕಿ 3 ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಶನಿವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಈ ದುರ್ಘ‌ಟನೆ ಸಂಭವಿಸಿದೆ ಎಂದು ರೈಲ್ವೆ ಟ್ರಾಕ್‌ ಮ್ಯಾನ್‌ ತಿಳಿಸಿದ್ದಾರೆ.

Advertisement

ಅಮದಳ್ಳಿ ಚೆಂಡಿಯಾ ಮಧ್ಯದ ಭಜನಕೇರಿಯ ಬಳಿ ಕೊಂಕಣ ರೈಲ್ವೆ ಮಾರ್ಗ ಹಾದು ಹೋಗಿದ್ದು, ಪಕ್ಕದಲ್ಲಿ ಅರಣ್ಯ ಹಾಗೂ ಗುಡ್ಡ ಪ್ರದೇಶವಿದ್ದು, ಇಲ್ಲಿ ಚಿರತೆಗಳ ಸಂಚಾರವಿದೆ. ಚಿರತೆ ಹಳಿ ದಾಟುವಾಗ ಚಲಿಸುತ್ತಿದ್ದ ರೈಲಿಗೆ ಸಿಕ್ಕಿದೆ. ರೈಲು ಬಡಿದು 3 ವರ್ಷದ ಗಂಡು ಚಿರತೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಉಪಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ಮೃತಪಟ್ಟ ಚಿರತೆಯನ್ನು ವೀಕ್ಷಿಸಿದರು. ಅವರ ಜೊತೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ ಕುಮಾರ, ವಲಯ ಅರಣ್ಯಾಧಿಕಾರಿ ಜಿ.ವಿ. ನಾಯ್ಕ, ಪಶು ವೈದ್ಯಾಧಿ ಕಾರಿ, ಕೊಂಕಣ ರೈಲ್ವೆ ಸೆಕ್ಷನ್‌ ಇಂಜಿನಿಯರ ಒಳಗೊಂಡಂತೆ ಪಂಚರ ಸಮ್ಮುಖದಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಯಿತು.

ಕಾರವಾರ ಉಪಸಂರಕ್ಷಣಾಧಿಕಾರಿ ಆದೇಶದಂತೆ ಚಿರತೆಯ ಕಳೆಬರವನ್ನು ದಹಿಸಲು ಸೂಕ್ತ ಕ್ರಮ ಜರುಗಿಸಲಾಯಿತು. ನಂತರ ಕೊಂಕಣ ರೈಲ್ವೆ ಹಳಿಗಳ ಮೇಲೆ ವನ್ಯಪ್ರಾಣಿಗಳು ಸಾವನ್ನಪ್ಪುತ್ತಿರುವುದನ್ನು ತಡೆಗಟ್ಟಲು ಪರಿಹಾರ ಕ್ರಮ ಕೈಗೊಳ್ಳುವ ಪ್ರಸ್ತಾವನೆ ತಯಾರಿಸಿ ಕೊಂಕಣ ರೈಲ್ವೆ ಅಧಿಕಾರಿಗಳು ಹಾಗೂ ಕೊಂಕಣ ರೈಲ್ವೆ ಮಂಡಳಿಗೆ ಕಳುಹಿಸುವ ಕುರಿತಂತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತೆಂದು ಉಪಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next