Advertisement

ಸೋಲಾರ್‌ ಪ್ಲಾಂಟ್‌ಗೆ ನುಗ್ಗಿದ ಚಿರತೆ: ಸಿಬ್ಬಂದಿಗೆ ಆತಂಕ

04:26 PM Feb 12, 2021 | Team Udayavani |

ಪಿರಿಯಾಪಟ್ಟಣ: ತಾಲೂಕಿನ ಕಲ್ಕೆರೆ ಮತ್ತು ದೊಡ್ಡ ಬ್ಯಾಲಾಳು ಗ್ರಾಮದ ಅದಾನಿ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕ ದಲ್ಲಿ ಗುರುವಾರ ಬೆಳಗಿನ ಜಾವ 7 ಗಂಟೆಸಮಯದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಭಯಭೀತರಾದ ಘಟನೆ ಗುರುವಾರ ನಡೆದಿದೆ.

Advertisement

ಚಿರತೆ ಇರುವ ಬಗ್ಗೆ ಇಲ್ಲಿನ ಸೋಲಾರ್‌ ಘಟಕದ ಸುರಕ್ಷತಾ ಅಧಿಕಾರಿ ಬಿ.ಸಿ.ತಮ್ಮಣ್ಣೇಗೌಡ ಎಂಬವರು ಕೂಡಲೇ ಪಿರಿಯಾಪಟ್ಟಣ ತಾಲೂಕು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಗಾಬರಿಗೊಂಡ ಚಿರತೆ ಸೋಲಾರ್‌ ಘಟಕದ ಸುತ್ತಲೂ ಹಾಕಿರುವ ತಂತಿ ಹಾಗೂ ಮುಳ್ಳಿನ ಬೇಲಿ ಹಾರಲು ಪ್ರಯತ್ನಿಸಿದರೂ ಸಾಧ್ಯವಾ ಗಿಲ್ಲ. ನಂತರ ಸೋಲಾರ್‌ ಘಟಕದ ಮುಖ್ಯ ದ್ವಾರದ ವಾಹನ ನಿಲುಗಡೆ ಶೆಡ್‌ನ‌ಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ತಂಗಿದ್ದು, ನಂತರ ಗೇಟ್‌ ಮೂಲಕ ಹೊರ ಹೋಗಿ ಪಕ್ಕದಲ್ಲೇ ಇರುವ ಸಾಮಾಜಿಕ ಅರಣ್ಯ ಪ್ರದೇಶದತ್ತ ಹೊರಟಿದ್ದು, ನಂತರ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಸಿಬ್ಬಂದಿಗೆ ಧೈರ್ಯ ತುಂಬಿದ ನಂತರ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next