ಬೆಂಗಳೂರು: ಒಲಂಪಿಕ್ಸ್ ನಲ್ಲಿ ಭಾಗವಸಿದ ದೇಶದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮಾಡಲು ಬಿಜೆಪಿ ಯುವ ಮೋರ್ಚಾದಿಂದ ಆಯೋಜನೆ ಮಾಡಲಾಗಿದ್ದ ಸೈಕಲ್ ರ‍್ಯಾಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭಾಗವಹಿಸಿದರು.
ಚಿಯರ್ ಫಾರ್ ಇಂಡಿಯಾ ಧ್ಯೇಯವಾಕ್ಯದಡಿ ಸೈಕಲ್ ರ‍್ಯಾಲಿ ಆಯೋಜನೆ ಮಾಡಲಾಗಿತ್ತು. ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿಯವರು ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿಧಾನಸೌಧ ಮುಂಭಾಗದ ಅಂಬೇಡ್ಕರ್ ವೀದಿಯಿಂದ ರ‍್ಯಾಲಿಗೆ ಚಾಲನೆ ನೀಡಲಾಯಿತು. ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಹಾಗೂ ಮಾಜಿ ಸಚಿವ ಸುಧಾಕರ್ ಭಾಗಿಯಾಗಿದ್ದರು.
ಇದನ್ನೂ ಓದಿ:ಬಾಣಂತಿಯನ್ನು ಮಗು ಸಮೇತ ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ
ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಮನುಷ್ಯ ಕೆಲವುಗಳನ್ನು ಬಹಳ ಸುಲಭವಾಗಿ ರೂಡಿಸಿಕೊಳ್ಳುತ್ತಾನೆ ಸೈಕಲ್ ನಿಂದ ನಮ್ಮ ದೇಹ ಆರಾಮದಾಯವಾಗಿರುತ್ತದೆ. ಒಲಂಪಿಕ್ ನಲ್ಲಿ ಭಾಗವಹಿಸಿದವರಿಗೆ ಸ್ಪೂರ್ತಿ ಸಿಗಲೆಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಯುವಕರು ಕರ್ನಾಟಕದ ಭವಿಷ್ಯ. ಇಂದು 56 ಸಾವಿರ ಜನರು ದೇಶದಲ್ಲಿ ಸೈಕಲಿಂಗ್ ಮಾಡುತ್ತಿದ್ದಾರೆ. ಯುವಕರಲ್ಲಿ ಶಕ್ತಿ ಇರುತ್ತದೆ, ಆದರೆ ಶಿಸ್ತು ಬೇಕು. ಹೀಗಾಗಿ ಸೈಕಲ್ ರ‍್ಯಾಲಿ ಆಯೋಜನೆ ಒಳ್ಳೆಯ ಅವಕಾಶ ಎಂದರು.