Advertisement

“ಮಣ್ಣು ಪರೀಕ್ಷಿಸಿ ಫ‌ಲವತ್ತತೆ ಕಾಪಾಡಿ’

04:15 PM Sep 05, 2017 | Team Udayavani |

ಚಿಂತಾಮಣಿ: ಬರಪೀಡಿತ ಬಯಲು ಸೀಮೆಯ ರೈತರು ಕೃಷಿ ರಂಗದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಜಮೀನಿನಲ್ಲಿ ಮಣ್ಣಿನ ಫ‌ಲವತ್ತತೆ ಕಾಪಾಡಿ ಮಣ್ಣಿನ ಗುಣಗಳನ್ನು ಸಂರಕ್ಷಿಸಬೇಕು. ಇದಕ್ಕಾಗಿ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ನಡೆಸಬೇಕು ಎಂದು ಕುರುಬೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ಪ್ರಾಧ್ಯಾಪಕ ಶಿವಪ್ಪ ತಿಳಿಸಿದರು.

Advertisement

ತಾಲೂಕಿನ ಎಸ್‌. ರಾಗುಟ್ಟಹಳ್ಳಿಯಲ್ಲಿ ಕುರುಬೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮತ್ತು ರೇಷ್ಮೆ ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಹಮ್ಮಿಕೊಂಡಿದ್ದ ಮಣ್ಣು ಮತ್ತು ನೀರು ಪರೀಕ್ಷೆ ಹಾಗೂ ರೈತರೊಂದಿಗೆ ಗುಂಪಯ ಚರ್ಚೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳ ಕುರಿತು ಮಾಹಿತಿ ನೀಡಿದರು.

ರಸ ಗೊಬ್ಬರ ಬೇಡ: ರೈತರು ಬಹಳಷ್ಟು ಸಂಖ್ಯೆಯಲ್ಲಿ ರಸಗೊಬ್ಬರಗಳನ್ನು ಬಳಸಿ ತಮ್ಮ ಭೂಮಿಯ ಫ‌ಲವತ್ತತೆಯನ್ನು ನಾಶ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ತಮ್ಮ ಭೂಮಿಯಲ್ಲಿ ಒಂದು ಬಾರಿ ಬೆಳೆದ ಬೆಳೆಯನ್ನು ಮತ್ತೆ ಬೆಳೆಯಲು ಆಗದೇ ಇಳುವರಿಯಲ್ಲಿ ಕುಂಠಿತಗೊಂಡು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದರು.
ಈ ವೇಳೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಲಾಯಿತು. ನಂತರ ರೈತರೊಬ್ಬರ ಕೈತೋಟಕ್ಕೆ ಭೇಟಿ ನೀಡಿ ಕೈತೋಟದ ಬಗ್ಗೆ ಮಾಹಿತಿ ನೀಡಿ, ರೈತರ ಜೊತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಈ ವೇಳೆ ವಿದ್ಯಾಲಯದ ಭೌತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಾಗೇಶ್‌, ರೇಷ್ಮೆ ಕೃಷಿ ವಿಭಾಗದ ಹರೀಶ್‌ ಬಾಬು, ವಿದ್ಯಾರ್ಥಿಗಳಾದ ಹನುಮಂತ, ಚಿರಂಜೀವಿ, ದಾಮೊದರ್‌, ಜಗದೀಶ್‌, ಗಜೇಂದ್ರ, ಪೂಜಾ ಪ್ರಿಯಾಂಕಾ, ವಿಶಾಲ್‌ ದೇವಯ್ಯ, ಗಿರೀಜ, ಗ್ರೀಷ್ಮಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next