Advertisement

ಗಡ್ಡಕ್ಕೂ ಒಲಿಂಪಿಕ್ಸ್‌! ಮೀಸೆ ತಿರುವಿ ಪ್ರಶಸ್ತಿ ಗೆದ್ದರು!

08:17 PM Oct 25, 2021 | Team Udayavani |

ಜರ್ಮನಿ: ಒಲಿಂಪಿಕ್ಸ್‌ ಮುಗಿದು, ಪ್ಯಾರಾ ಒಲಿಂಪಿಕ್ಸ್‌ ಕೂಡ ಮುಗಿದಿದೆ. ಇದೀಗ ಗಡ್ಡಕ್ಕೂ ಒಲಿಂಪಿಕ್ಸ್‌ ನಡೆದಿದೆ. ಜರ್ಮನಿಯಲ್ಲಿ ಇಂತದ್ದೊಂದು ಒಲಿಂಪಿಕ್ಸ್‌ ಇತ್ತೀಚೆಗೆ ನಡೆದಿದೆ.

Advertisement

ಜರ್ಮನಿಯ ಪುಲ್‌ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್‌ ಪಾರ್ಕ್‌ನಲ್ಲಿ ಗಡ್ಡದ ಒಲಿಂಪಿಕ್ಸ್‌ ನಡೆದಿದೆ. ಪೂರ್ವ ಬವಾರಿಯನ್‌ ಗಡ್ಡ ಮತ್ತು ಮೀಸೆಯ ಕ್ಲಬ್‌ ಈ ಒಲಿಂಪಿಕ್ಸ್‌ನ್ನು ಆಯೋಜಿಸಿತ್ತು.

ಜರ್ಮನಿ, ಇಟಲಿ, ಸ್ವಿಜರ್‌ಲೆಂಡ್‌, ಆಸ್ಟ್ರೇಲಿಯಾ ಸೇರಿ ಅನೇಕ ರಾಷ್ಟ್ರಗಳ ಜನರು ಇದರಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಗಡ್ಡಗಳನ್ನು ಬೆಳಸಿರುವ ಸುಮಾರು 100 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಗೋ ಕಳ್ಳಸಾಗಾಣಿಕೆ ತಡೆಯಲು ಕ್ರಮಕ್ಕೆ ಆಗ್ರಹ; ರಸ್ತೆ ತಡೆ ಮಾಡಿ ಪ್ರತಿಭಟನೆ

ಈ ಒಲಿಂಪಿಕ್ಸ್‌ನಲ್ಲೂ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿದ್ದು, ವಿಜೇತರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಗಾಗಿ ಏಳು ಪ್ರಸಿದ್ಧ ಕೂದಲು ವಿನ್ಯಾಸಕರನ್ನು ಜಡ್ಜ್ಗಳಾಗಿ ನೇಮಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next