Advertisement
ಇದು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು 1799 ರೂ. ದರ ಹೊಂದಿದೆ. ಗಡಿಯಾರವು ಕಪ್ಪು, ಕಿತ್ತಳೆ, ಹಳದಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ.
ವಿನ್ಯಾಸ: ಸ್ಮಾರ್ಟ್ ವಾಚ್ ಜಿಂಕ್-ಅಲಾಯ್ ಮೆಟಾಲಿಕ್ ಫ್ರೇಮ್ ಮತ್ತು ತಿರುಗುವ ಕ್ರೌನ್ ಕೀಯನ್ನು ಹೊಂದಿದೆ. ಕೀಯನ್ನು ತಿರುಗಿಸಿದಾಗ ವಾಚ್ ನ ಫೇಸ್ ಗಳು ಬದಲಾಗುತ್ತವೆ. ಮೆಟಲ್ ಫ್ರೇಮ್ ಮತ್ತು ಚೌಕದ ವಿನ್ಯಾಸ ಪ್ರೀಮಿಯಂ ಆಗಿದೆ. ಈ ದರದಲ್ಲಿ ಹಲವು ಕಂಪೆನಿಗಳ ವಾಚ್ ಗಳು ಪ್ಲಾಸ್ಟಿಕ್ ಕೇಸ್ ಗಳನ್ನು ಹೊಂದಿರುತ್ತವೆ.ಕ್ರೌನ್ ಕೀ ಪಕ್ಕದಲ್ಲಿ ಇನ್ನೊಂದು ಬಟನ್ ನೀಡಿದ್ದು, ಇದನ್ನು ಒತ್ತಿದಾಗ ವಾಚ್ ಸೆಟಿಂಗ್ ಆಯ್ಕೆ ಇತ್ಯಾದಿಗಳನ್ನು ಮಾಡಬಹುದು. ವಾಚ್ ನ ಎಡಬದಿಯಲ್ಲಿ ಸ್ಪೀಕರ್ ಕಿಂಡಿಗಳಿವೆ. ಅದರ ಪಕ್ಕದಲ್ಲಿ ಮೈಕ್ ಕಿಂಡಿ ಇದೆ. ವಾಚಿನ ಸ್ಟ್ರಾಪ್ ಸಿಲಿಕಾನ್ ನದ್ದಾಗಿದೆ. ಚೈನ್ ನಂತೆ ಕಾಣುವ ಕಂಡಿಕೆಗಳನ್ನು ಸ್ಟ್ರಾಪ್ ಹೊಂದಿದೆ. ಗಡುಸಾಗಿರುವ ಡಯಲ್ ಗೆ ಹೊಂದಿಕೆಯಾಗುತ್ತದೆ. ಒಟ್ಟಾರೆ ಈ ವಾಚು ಕೈಗೆ ಕಟ್ಟಿಕೊಂಡಾಗ ದುಬಾರಿ ವಾಚ್ ನಂತೆ ತೋರುತ್ತದೆ. ಪರದೆ: ಈ ವಾಚು 1.95-ಇಂಚಿನ HD display ಹೊಂದಿದೆ, ಅದು 900 nits ವರೆಗಿನ ಗರಿಷ್ಠ ಹೊಳಪನ್ನು ನೀಡುತ್ತದೆ. ಹೊರಾಂಗಣದಲ್ಲಿ ಬಿಸಿಲಿನಲ್ಲಿದ್ದರೂ ಪರದೆ ಪ್ರಕಾಶಮಾನವಾಗಿ ಕಾಣುತ್ತದೆ. ಪರದೆಯ ಸಂವೇದಕದ ಗುಣಮಟ್ಟ ಚೆನ್ನಾಗಿದೆ. ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಆಗಿದೆ. 150ಕ್ಕೂ ಹೆಚ್ಚು ವಾಚ್ ಫೇಸ್ ಗಳನ್ನು ಮೊಬೈಲ್ ಆಪ್ ಗೆ ಸಂಪರ್ಕ ಮಾಡಿಕೊಂಡು ಬದಲಿಸಿಕೊಳ್ಳಬಹುದು.
Related Articles
Advertisement
ವಾಚನ್ನು ಮೊಬೈಲ್ ಫೋನ್ ನಲ್ಲಿ ಬೌಲ್ಟ್ ಫಿಟ್ ಎಂಬ ಆಪ್ ಮೂಲಕ ಸಂಪರ್ಕ ಮಾಡಬೇಕು. ಆಪ್ ಇನ್ ಸ್ಟಾಲ್ ಮಾಡಿಕೊಂಡ ಬಳಿಕ ಬ್ಲೂಟೂತ್ ಮೂಲಕ, ಸೈನ್ ಇನ್ ಇತ್ಯಾದಿ ಕಿರಿಕಿರಿಯಿಲ್ಲದೇ ಸಂಪರ್ಕಗೊಳ್ಳುತ್ತದೆ. ಜೊತೆಗೆ ಸ್ತ್ರೀ ಆರೋಗ್ಯ ಟ್ರ್ಯಾಕರ್, ಚಟುವಟಿಕೆ ಟ್ರ್ಯಾಕರ್ ಮತ್ತು ನಿದ್ರೆ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇದು ಕ್ರಿಕೆಟ್, ಓಟ, ಸೈಕ್ಲಿಂಗ್, ಬ್ಯಾಸ್ಕೆಟ್‌ಬಾಲ್, ಯೋಗ ಮತ್ತು ಈಜು ಸೇರಿದಂತೆ 100 ಕ್ಕೂ ಹೆಚ್ಚು ಮೋಡ್ ಗಳನ್ನು ಹೊಂದಿದೆ. ಕ್ರೀಡಾ ಮೋಡ್‌ಗಾಗಿ ಮೀಸಲಾದ ಬಟನ್ ಇದೆ.
ಸ್ಮಾರ್ಟ್ ವಾಚ್‌ಗಾಗಿ ಬಳಕೆದಾರರು 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳು ಮತ್ತು ಎಂಟು ವಿಭಿನ್ನ UI ಗಳಿಂದ ಆಯ್ಕೆ ಮಾಡಬಹುದು. ಇದಲ್ಲದೆ, ವಾಚ್‌ನಲ್ಲಿ AI ಧ್ವನಿ ಸಹಾಯ ಮತ್ತು ಫೈಂಡ್ ಮೈ ಫೋನ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ವಾಚ್‌ನಲ್ಲಿನ ಇತರ ವೈಶಿಷ್ಟ್ಯಗಳು: ವಾಚ್ ನಲ್ಲೇ ಎಸ್ ಎಂ ಎಸ್ ನೋಡಬಹುದು, ಸೋಶಿಯಲ್ ಆಪ್ ಗಳ ನೊಟಿಫಿಕೇಷನ್ ತಿಳಿಯಬಹುದು. ಅಂತರ್ಗತ ಅಲಾರಾಂ ಗಡಿಯಾರ, ಟೈಮರ್, ಸ್ಟಾಪ್‌ವಾಚ್, ಹವಾಮಾನ ಅಧಿಸೂಚನೆಗಳು, ಬಹುಕಾಲ ಕುಳಿತಿದ್ದೀರಿ ಎಂದು ಜ್ಞಾಪಿಸುವ ಸೂಚನೆ, ಮತ್ತು ಅಂತರ್ಗತ ಮಿನಿ ಗೇಮ್‌ಗಳನ್ನು ಒಳಗೊಂಡಿವೆ. ಬೌಲ್ಟ್ ಕ್ರೌನ್ ಸಂಪರ್ಕಿತ ಸ್ಮಾರ್ಟ್‌ಫೋನ್‌ನಿಂದ ಸಂದೇಶಗಳು, ಕರೆಗಳು ಮತ್ತು ಇತರ ಅಪ್ಲಿಕೇಶನ್‌ಗಳಿಗೆ ಸ್ಮಾರ್ಟ್ ಅಧಿಸೂಚನೆಗಳನ್ನು ಸಹ ನೀಡುತ್ತದೆ.
ಬ್ಯಾಟರಿಯನ್ನು 150 ನಿಮಿಷಗಳ ಕಾಲ ಚಾರ್ಜ್ ಮಾಡಬೇಕು. ಸುಮಾರು 5-6 ದಿವಸಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.
ಒಟ್ಟಾರೆ ಬೆಲೆ ಕಡಿಮೆಯಿದ್ದೂ ಗಡುಸಾದ ಲೋಹದ ಫ್ರೇಮ್, ಉತ್ತಮ ಪರದೆ, ವಿನ್ಯಾಸದ ಮೂಲಕ ಈ ವಾಚ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎನ್ನಬಹುದು.-ಕೆ.ಎಸ್. ಬನಶಂಕರ ಆರಾಧ್ಯ