ಚಿಕ್ಕನಾಯಕನಹಳ್ಳಿ: ಕೋವಿಡ್ ಲಕ್ಷಣವಿದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ, ಉದಾಸೀನದಿಂದ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಕೋವಿಡ್ ಬಗ್ಗೆ ಭಯ ಬೇಡ ಸೋಂಕಿತ ರೋಗಿಗಳು ಅದೇ ಪ್ರಮಾಣದಲ್ಲಿ ಗುಣ ಮುಖ ರಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕೋವಿಡ್ 19ಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ಕೋವಿಡ್ ಕೇರ್‌ಗೆ ಅಗತ್ಯ ಬೆಡ್, ಕಾಟ್ ಹಾಗೂ ವೆಂಟಿಲೇಟರ್ ಸೌಲಭ್ಯ ನೀಡಲಾ ಗುತ್ತದೆ. ತಾಲೂಕಿನ ಕೊರೊನಾ ಪಾಸಿಟಿವ್ ರೋಗಿಗಳನ್ನು ಇಲ್ಲಿನ ಕೋವಿಡ್ ಕೇರ್‌ನಲ್ಲಿ ದಾಖಲು ಮಾಡಿಕೊಳ್ಳಿ, ಎಮ ರ್ಜೆನ್ಸಿ ರೋಗಿಗಳನ್ನು ಜಿಲ್ಲಾ ಕೋವಿಡ್ ಕೇರ್‌ಗೆ ಕಳುಹಿಸಿಕೊಡಿ ಎಂದರು.
ಪುರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಟ್ಟು ನಿಟ್ಟಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ಕೊರೊನಾ ಪಾಸಿಟಿವ್‌ನಿಂದ ಗುಣಮುಖರಾದ ವ್ಯಕ್ತಿಯನ್ನು ಸಹ ಕೆಳ ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ನೋಡಿಕೊಳ್ಳ ಬೇಕು. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳನ್ನು ಸಹ ಕೋವಿಡ್ ಡ್ಯೂಟಿಗೆ ಅವಶ್ಯಕತೆ ಇದ್ದರೆ ನಿಯೋಜನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ . ಮಾಧು ಸ್ವಾಮಿ ಮಾತನಾಡಿ, ಸೀಲ್ ಡೌನ್ ಪ್ರದೇಶವನ್ನು ಕಟ್ಟು ನಿಟ್ಟಾಗಿ ಬಂದೋಬಸ್ತ್ಗೊಳಿಸಿ, ಒಳಗಿರುವವರು ಹೊರಗೆ ಬರದಂತೆ ಕ್ರಮಕೈಗೊಳ್ಳಿ, ಪಟ್ಟಣದ ಹೊಸಬೀದಿ ಸೀಲ್‌ಡೌನ್ ಪ್ರದೇಶದಲ್ಲಿನ ಜನರ ಕೋವಿಡ್ ಚಿಕಿತ್ಸೆ ನಡೆಸಿ ನೆಗೆಟಿವ್ ಬಂದರೆ, ಸೀಲ್‌ಡೌನ್ ಪ್ರದೇಶವನ್ನು ತೆರವುಗೊಳಿಸಿ. ಕೋವಿಡ್ ಸೋಂಕಿತನು ಗುಣಮುಖವಾಗಿ ಬಂದರು 14 ದಿನ ಹೋಂ ಕ್ವಾರಂಟೈನ್ ಮಾಡಿ, ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯದೊಂದಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಿದ್ಧವಾಗಿರಬೇಕು. ತಾಲೂಕಿನಲ್ಲಿ ಆದಷ್ಟು ಕೊರೊನಾ ತಡೆಗಟ್ಟಲು ಪ್ರಮಾಣಿಕ ಪ್ರಯತ್ನ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.