Advertisement

ಒಳಚರಂಡಿ ಕಾಮಗಾರಿ ಪರಿಶೀಲಿಸಿ ಹಸ್ತಾಂತರ: ಹಟ್ಟಿ

06:07 PM Jul 19, 2022 | Shwetha M |

ಕೊಲ್ಹಾರ: ಪಟ್ಟಣದ ಒಳಚರಂಡಿ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು ಸಂಪೂರ್ಣ ಪರಿಶೀಲನೆ ನಡೆಸಿ ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ ಹೇಳಿದರು.

Advertisement

ಪಟ್ಟಣ ಪಂಚಾಯತ್‌ ಸಭಾಭವನದಲ್ಲಿ ನೂತನ ಸದಸ್ಯರ ಜೊತೆ ಹಸ್ತಾಂತರ ಪ್ರಕ್ರಿಯೆ ಕುರಿತು ಚರ್ಚಿಸಿ ಮಾತನಾಡಿದ ಅವರು, ಪಟ್ಟಣದ ಪ್ರತಿ ಮನೆಗೂ ಒಳಚರಂಡಿ ಜೋಡಣೆ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು. ಸಾರ್ವಜನಿಕರು ಸೂಕ್ತ ದಾಖಲೆಗಳೊಂದಿಗೆ ಪಪಂ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ, ಪ್ರತಿಯೊಬ್ಬರು ಖಡ್ಡಾಯವಾಗಿ ಒಳಚರಂಡಿ ಜೊಡಣೆ ಮಾಡಿಸಿಕೊಳ್ಳಬೇಕು. ಪಪಂ ಕಾರ್ಯಾಲಯದಿಂದ ಜೋಡಣಾ ವೆಚ್ಚ ಮಾತ್ರ ನಿಗದಿ ಮಾಡಿದ್ದು ಜೋಡಣೆಗೆ ಬೇಕಾದ ಸಲಕರಣೆಗಳನ್ನು ವಾರಸುದಾರರು ನೀಡಬೇಕು ಎಂದರು.

ಪಪಂ ಕಾರ್ಯಾಲಯ ನಿಗದಿ ಪಡಿಸಿದ ದರಗಳ ಬಗ್ಗೆ ಈ ರೀತಿಯಾಗಿ ಮಾಹಿತಿ ನೀಡಿದರು. ಗೃಹಬಳಕೆಯ ಪ್ರತಿ ಮನೆಗೆ ಜೋಡಣಾ ವೆಚ್ಚ 3500 ರೂ. ಹಾಗೂ ವಾರ್ಷಿಕ 180 ರೂ., ಗೃಹೇತರ 4500 ರೂ. ಹಾಗೂ ವಾರ್ಷಿಕ ವೆಚ್ಚ 360 ರೂ., ವಾಣಿಜ್ಯ 4500 ರೂ., ವಾರ್ಷಿಕ ವೆಚ್ಚ 720 ರೂ., ಖಾಸಗಿ ಆಸ್ಪತ್ರೆ, ಕಲ್ಯಾಣ ಮಂಟಪ, ಲಾಡ್ಜ್ ಇತರೆ 6000 ರೂ. ಹಾಗೂ ವಾರ್ಷಿಕ ವೆಚ್ಚ 720 ರೂ. ನಿಗದಿ ಮಾಡಿದ್ದು ಸಾರ್ವಜನಿಕರು ಪಪಂ ಕಾರ್ಯಾಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಪಪಂ ಸದಸ್ಯ ಸಿ.ಎಸ್‌. ಗಿಡ್ಡಪ್ಪಗೋಳ, ಶ್ರೀಶೈಲ್‌ ಮುಳವಾಡ, ಬಾಬು ಭಜಂತ್ರಿ, ಮಹಾಂತೇಶ ಗಿಡ್ಡಪ್ಪಗೋಳ, ಶ್ರೀಶೈಲ ಅಥಣಿ, ರಾವತಪ್ಪ ಮಟ್ಟಿಹಾಳ, ಶಿವಪ್ಪ ವಾಲೀಕಾರ, ಮುಖಂಡರಾದ ದಶರಥ ಈಟಿ, ಮಹೇಬೂಬ ಕಲಾದಗಿ, ಇಕ್ಬಾಲ್‌ ನದಾಫ್‌, ಬನಪ್ಪ ಬಾಲಗೊಂಡ, ಅಶೋಕ ಜಿಡ್ಡಿಬಾಗಿಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next